ಸಾರ್ವಜನಿಕ ಗಣೇಶೋತ್ಸವ: ಉಡುಪಿ ಪೊಲೀಸ್ ಉಪವಿಭಾಗದಿಂದ ಸಭೆ

ಉಡುಪಿ, ಆ.24: ಉಡುಪಿ ಪೊಲೀಸ್ ಉಪವಿಭಾಗದ ವತಿಯಿಂದ ವಿವಿಧ ಠಾಣೆಗಳ ವ್ಯಾಪ್ತಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರು/ಕಾರ್ಯದರ್ಶಿ, ಬ್ಯಾನರ್/ಬಂಟಿಂಗ್ಸ್ ಮಾಲಕರು, ಡಿಜೆ ಮತ್ತು ಸೌಂಡ್ ಸಿಸ್ಟಮ್ ಮಾಲಕರ ಸಭೆಯನ್ನು ರವಿವಾರ ಉಡುಪಿ ಜಗನ್ನಾಥ ಸಭಾಭವನದಲ್ಲಿ ಆಯೋಜಿಸಲಾಗಿತ್ತು.
ಉಡುಪಿ ನಗರ ಠಾಣೆ, ಮಣಿಪಾಲ ಠಾಣೆ, ಹಿರಿಯಡ್ಕ ಠಾಣೆ, ಮಲ್ಪೆ ಠಾಣೆ, ಬ್ರಹ್ಮಾವರ ಠಾಣೆ, ಕೋಟ ಠಾಣೆ ವ್ಯಾಪ್ತಿಯ ವಿವಿಧ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು. ಅಧ್ಯಕ್ಷತೆಯನ್ನು ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ. ವಹಿಸಿದ್ದರು. ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಮಂಜುನಾಥ್ ಬಡಿಗೇರ, ಮಲ್ಪೆ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್, ಮಣಿಪಾಲ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಉಪಸ್ಥಿತರಿದ್ದರು.
Next Story





