ಕಿರಿಮಂಜೇಶ್ವರ ಅಲ್ ರಿದ್ವಾನ್ ಶಾಲೆಗೆ ನೆರವು

ಕುಂದಾಪುರ, ಆ.24: ನಮ್ಮ ನಾಡ ಒಕ್ಕೂಟದ ಕುಂದಾಪುರ ಕಮ್ಯೂನಿಟಿ ಸೆಂಟರ್ ವತಿಯಿಂದ ಅಲ್ ರಿದ್ವಾನ್ ಇಂಡಿಯನ್ ಸ್ಕೂಲ್ ಆಫ್ ಎಕ್ಸಲೆನ್ಸ್ ದಾರುಲ್ ಅರ್ಕ್ಮ್ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಕಿರಿಮಂಜೇಶ್ವರ ಇಲ್ಲಿಗೆ ಸಹಾಯಧನವನ್ನು ನೀಡಲಾಯಿತು.
ಕುಂದಾಪುರ ಕಮ್ಯೂನಿಟಿ ಸೆಂಟರ್ ಪ್ರಧಾನ ಕಾರ್ಯದರ್ಶಿ ಹುಸೇನ್ ಹೈಕಾಡಿ ಶಾಲೆಯ ಆಡಳಿತ ಮಂಡಳಿಯ ವರಿಗೆ ಚೆಕ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ನಮ್ಮ ನಾಡ ಒಕ್ಕೂಟ ಕೇಂದ್ರ ಸಮಿತಿಯ ಖಜಾಂಚಿ ಪೀರು ಸಾಹೇಬ್, ಜಿಲ್ಲಾ ಸದ್ಯಸ್ಯರಾದ ಹಾರುನ್ ರಶೀದ್ ಸಾಸ್ತಾನ್, ಅಬ್ದುಲ್ ಖಾದರ್ ಮೂಡುಗೋಪಾಡಿ, ಕಮ್ಯೂನಿಟಿ ಸೆಂಟರ್‌ನ ಸದ್ಯಸ್ಯರಾದ ಮನ್ಸೂರ್ ಇಬ್ರಾಹಿಂ, ಅಕ್ರಮ್ ಉಡುಪಿ, ಯಾಸಿನ್ ಹೆಮ್ಮಾಡಿ, ಶಾಲೆಯ ಸಂಚಾಲಕ ರಾದ ತೌಸೀಫ್ ಅಹ್ಮದ್, ಮೊಹಮ್ಮದ್ ಅಶ್ರಫ್ ಉಪಸ್ಥಿತರಿದ್ದರು.
Next Story





