ಹಫ್ತಾ ನೀಡುವಂತೆ ಕಲ್ಲುಕೋರೆ ಮಾಲಕನಿಗೆ ಕೊಲೆ ಬೆದರಿಕೆ: ಪ್ರಕರಣ ದಾಖಲು

ಶಂಕರನಾರಾಯಣ, ಆ.25: ಕಲ್ಲುಕೋರೆ ಮಾಲಕರೊಬ್ಬರಿಗೆ ಹಪ್ತಾ ನೀಡುವಂತೆ ಜೀವ ಬೆದರಿಕೆಯೊಡ್ಡಿರುವ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಲಿಯಾಣ ಗ್ರಾಮದಲ್ಲಿರುವ ಕಲ್ಲುಕೋರೆ ನಡೆಸುತ್ತಿದ್ದ ಬೆಳ್ವೆ ಗ್ರಾಮದ ಮಾಜಿ ಗ್ರಾಪಂ ಅಧ್ಯಕ್ಷ ಉದಯ ಕುಮಾರ(54) ಎಂಬವರು ಆ.23ರಂದು ಕಲ್ಲುಕೋರೆಯಲ್ಲಿ ನಿಂತಿರುವಾಗ ಮಹಾಬಲೇಶ್ವರ ಎಂಬಾತ ಬೈಕಿನಲ್ಲಿ ಬಂದು, ಅವಾಚ್ಯವಾಗಿ ಬೈದು, ಕಲ್ಲುಕೋರೆ ನಡೆಸಬೇಕಾದರೆ ತಿಂಗಳಿಗೆ 50,000ರೂ. ಹಪ್ತ ಕೋಡಬೇಕು, ಇಲ್ಲದಿದ್ದರೆ ನಿನ್ನನ್ನು ಕೊಲ್ಲುತ್ತೇನೆ ಎಂದು ಕತ್ತಿಯನ್ನು ತೋರಿಸಿ ಜೀವ ಬೆದರಿಕೆ ಹಾಕಿದ್ದನು ಎಂದು ದೂರಲಾಗಿದೆ.
ಮಹಾಬಲೇಶ್ವರ ಕ್ರೀಮಿನಲ್ ಹಿನ್ನಲೆಯಳ್ಳವನಾಗಿದ್ದು ಈ ಹಿಂದೆ ಉದಯ ಕುಮಾರ್ ಪಂಚಾಯತ್ ಅಧ್ಯಕ್ಷರಾಗಿ ದ್ದಾಗ ಸಾರ್ವಜನಿಕರು ಮಹಾಬಲೇಶ್ವರ ಸುಳ್ಳು ದಾಖಲೆ ಸೃಷ್ಟಿಸಿ ಜಾಗವನ್ನು ತನ್ನ ಹೆಸರಿಗೆ ದಾಖಲಿಸಿ ಕೊಂಡಿರುವುದಾಗಿ ದೂರು ನೀಡಿದಾಗ ಆತನನ್ನು ವಿಚಾರಿಸಿದ್ದರು. ಆ ಕೋಪದಿಂದ ಉದಯ ಕುಮಾರಂ ಅವರಿಗೆ ತೊಂದರೆ ಮಾಡುತ್ತಿದ್ದು, ಅದೇ ಹಳೆಯ ದ್ವೇಷ ಹಾಗೂ ಹಪ್ತ ನೀಡದಿರುವುದಕ್ಕೆ ಗಲಾಟೆ ಮಾಡಿದ್ದಾನೆ ಎಂದು ದೂರಲಾಗಿದೆ.





