ಸ್ಪೀಡ್ ಪೋಸ್ಟ್ ಹೆಸರಿನಲ್ಲಿ ಆನ್‌ಲೈನ್ ವಂಚನೆ: ಪ್ರಕರಣ ದಾಖಲು

ಮಣಿಪಾಲ, ಆ.29: ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಂದರ (75) ಎಂಬವರು ಆ.20ರಂದು ಮುಂಬೈನಲ್ಲಿರುವ ಬಾವನಿಗೆ ಚೆಕ್ ರಿಕ್ವೆಸ್ಟ್ ಸ್ಲಿಪ್‌ನ್ನು ಕಳುಹಿಸಿದ್ದು ಆ.26ರವರೆಗೆ ತಲುಪಿರಲಿಲ್ಲ. ಆ.26ರಂದು ಆನ್‌ಲೈನ್ ಮುಖಾಂತರ ಸ್ಪೀಡ್ ಪೋಸ್ಟ್ ಆಪೀಸ್ ನಂಬರ್ ಹುಡುಕಿ ಕರೆ ಮಾಡಿದಾಗ ನಿಮ್ಮ ಪೋಸ್ಟ್ ಮಾಡಲು 5ರೂ. ಕಡಿಮೆ ಇದೆ, ಇದನ್ನು ನೀವು ಆನ್‌ಲೈನ್ ಮೂಲಕ ಪಾವತಿಸ ಬೇಕು ಎಂದು ಹೇಳಿದ್ದರು. ಅದರಂತೆ ಸುಂದರ ಹಣ ಹಾಕಿದ್ದು, ನಂತರ ಸುಂದರ ಅವರಿಗೆ ತಿಳಿಯದಂತೆ ಅವರ ಖಾತೆಯಿಂದ 1,50,000ರೂ. ವರ್ಗಾವಣೆ ಮಾಡಿಕೊಂಡು ನಂಬಿಸಿ ಮೋಸ ಮಾಡಿರುವುದಾಗಿ ದೂರಲಾಗಿದೆ.
Next Story





