ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ‘ವ್ಯಾನಾ’ ರತ್ನಾಭರಣ ಅನಾವರಣ

ಉಡುಪಿ, ಆ.30: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ‘ವ್ಯಾನಾ’ ರತ್ನಾಭರಣಗಳ ಸಂಗ್ರಹವನ್ನು ಗ್ರಾಹಕರಾದ ಹರ್ಷಲ್ ಹಾಗೂ ಶ್ರಾವ್ಯ ಶನಿವಾರ ಅನಾವರಣಗೊಳಿಸಿದರು.
ಉಡುಪಿ ಶಾಖಾ ಮುಖ್ಯಸ್ಥ ಹಫೀಝ್ ರೆಹಮಾನ್ ಮಾತನಾಡಿ, ವ್ಯಾನಾ ಕೇವಲ ಒಂದು ಆಭರಣ ಸಂಗ್ರಹವಲ್ಲ, ಅದು ಮಹಿಳೆಯ ಆತ್ಮದ ಅನೇಕ ಬಣಗಳಿಗೆ ಬಣ್ಣಗಳಿಗೆ ಸಮ ಸಮರ್ಪಿತವಾದ ಗೌರವ ಎಂದು ಹೇಳಿದರು.
ಸಂಸ್ಥೆಯ ಸಿಬ್ಬಂದಿ ಸಮೀರ್ ಮಾತನಾಡಿ, ವ್ಯಾನಾ ವೈಯಕ್ತಿಕತೆ, ಅಂತರಂಗ ಶಕ್ತಿ ಹಾಗೂ ಸ್ವ-ಅಭಿವ್ಯಕ್ತಿಗೆ ಸಮರ್ಪಿತವಾದ ಒಂದು ಗೌರವ ಸಂಕೇತವಾಗಿದೆ. 18 ಕ್ಯಾರೆಟ್ ಹಾಗೂ 22 ಕ್ಯಾರೆಟ್ ಚಿನ್ನದಲ್ಲಿ ನಿಖರವಾಗಿ ತಯಾರಿಸಲಾದ ವ್ಯಾನಾ ಸಂಗ್ರಹವು ಹಗುರವಾದ, ಆಧುನಿಕ ವಿನ್ಯಾಸಗಳನ್ನು ಒಳಗೊಂಡಿದೆ. ವ್ಯಾನಾ ಪರಂಪರೆ ಯನ್ನು ಗೌರವಿಸುವುದರ ಜೊತೆಗೆ ತನ್ನದೇ ವಿಶಿಷ್ಟ ಶೈಲಿಯಲ್ಲಿ ಹೊಳೆಯುವ ಮಹಿಳೆಯನ್ನು ಸಂಭ್ರಮಿಸುತ್ತದೆ ಎಂದು ತಿಳಿಸಿದರು.
ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಜೆಮ್ಸ್ ಸ್ಟೋನ್ ಜುವೆಲ್ಲರಿ ಫೆಸ್ಟಿವಲ್‌ನಲ್ಲಿ ವ್ಯಾನಾ ಸಂಗ್ರಹದೊಂದಿಗೆ ಅಮೂಲ್ಯ ರತ್ನಾಭರಣ ಹಾಗೂ ಅನ್‌ಕಟ್ ಡೈಮಂಡ್ಸ್‌ಗಳನ್ನು ಒಳಗೊಂಡ ಸಾಂಪ್ರದಾಯಿಕ ಆಭರಣ ಸಂಗ್ರಹ ವನ್ನೂ ಪ್ರದರ್ಶಿಸುತ್ತಿದೆ. ಗ್ರಾಹಕರು ಎಲ್ಲಾ ರತ್ನಾಭರಣ ಮತ್ತು ಅನ್‌ಕಟ್ ಡೈಮಂಡ್ ಆಭರಣಗಳ ತಯಾರಿಕಾ ಶುಲ್ಕದಲ್ಲಿ ಗರಿಷ್ಠ ಶೇ.25ರವರೆಗೆ ರಿಯಾಯಿತಿಯನ್ನು ಪಡೆಯಬಹುದು. ಈ ವಿಶೇಷ ಕೊಡುಗೆ ಸೆ.7ರವರೆಗೆ ಮುಂದುವರೆಯಲಿದೆ ಎಂದು ಮಾರುಕಟ್ಟೆ ವ್ಯವಸ್ಥಾಪಕ ತಂಝೀಮ್ ಶಿರ್ವ ಹೇಳಿದರು.
ಕಾರ್ಯಕ್ರಮದಲ್ಲಿ ಶಾಖಾ ಸೇಲ್ಸ್ ಮ್ಯಾನೇಜರ್ ಮುಸ್ತಫಾ ಎ.ಕೆ., ಗುರುರಾಜ್, ಹರೀಶ್, ದಿವ್ಯಾ ಉಪಸ್ಥಿತರಿದ್ದರು. ವಿಘ್ನೇಶ್ ಕಾರ್ಯಕ್ರಮ ನಿರೂಪಿಸಿದರು. ನಿತ್ಯಾನಂದ ನಾಯಕ್ ವಂದಿಸಿದರು.







