ಮಹಿಳೆಗೆ ವರದಕ್ಷಿಣೆ ಕಿರುಕುಳ: ಪ್ರಕರಣ ದಾಖಲು

ಗಂಗೊಳ್ಳಿ, ಆ.30: ಮಹಿಳೆಯೊಬ್ಬರಿಗೆ ಪತಿ ಹಾಗೂ ಅವರ ಮನೆಯವರು ವರದಕ್ಷಿಣೆ ಕಿರುಕುಳ ನೀಡಿ, ಕೊಲೆಬೆದರಿಕೆಯೊಡ್ಡಿರುವ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಗೊಳ್ಳಿ ಗ್ರಾಮದ ದೀಪಿಕಾ(30) ಎಂಬವರು 2016ರ ಎ.28ರಂದು ಉಡುಪಿಯ ಶ್ಯಾಮಿಲಿ ಸಭಾಗೃಹದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಸಂತೋಷ ಎಂಬವರನ್ನು ವಿವಾಹವಾಗಿದ್ದು, ಗಂಡನ ಮನೆಯಾದ ಸಾಲಿಗ್ರಾಮ ಪಾರಂಪಳ್ಳಿ ಎಂಬಲ್ಲಿ ವೈವಾಹಿಕ ಜೀವನ ನಡೆಸುತ್ತಿದ್ದರು.
ಬಳಿಕ ಸಂತೋಷ, ಶೋಭಾ, ಸಂಗೀತಾ ಎಂಬವರು ದೀಪಿಕಾ ಅವರಿಗೆ ತವರಿನಿಂದ ಚಿನ್ನ ಮತ್ತು ಹಣವನ್ನು ವರದಕ್ಷಿಣೆಯಾಗಿ ತಂದಿಲ್ಲವೆಂದು ಮೂದಲಿಸಿ ಮಾನಸಿಕ ಹಿಂಸೆ ನೀಡಿ, ಬೈದು ಅವಮಾನಿಸಿ, ಕೈಯಿಂದ ಹೊಡೆದು, ಕೊಲೆ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ.
Next Story





