ಬೈಂದೂರು: ಮೀನುಗಾರನ ಮೃತದೇಹ ಪತ್ತೆ

ಬೈಂದೂರು, ಆ.30: ಭಟ್ಕಳ ಅಳ್ವೆ ಬಂದರಿನ ಸಮೀಪ ಬೋಟಿನಿಂದ ಆಯತಪ್ಪಿ ಸಮುದ್ರಕ್ಕೆ ಬಿದ್ದ ಮೀನುಗಾರ ರೊಬ್ಬರ ಮೃತದೇಹ ಕಿರಿಮಂಜೇಶ್ವರ ಜನತಾ ಆಂಗ್ಲ ಮಾಧ್ಯಮ ಶಾಲೆಯ ಸಮೀಪ ಕಡಲ ಕಿನಾರೆಯಲ್ಲಿ ಆ.30ರಂದು ಬೆಳಗ್ಗೆ ಪತ್ತೆಯಾಗಿದೆ.
ಮೃತರನ್ನು ಹೊನ್ನಾವರದ ಮಂಜು ಸಾತ ಗೌಡ(55) ಎಂದು ಗುರುತಿಸಲಾಗಿದೆ. ಇವರು ಆ.26ರಂದು ಬೋಟ್‌ನಲ್ಲಿ ಮೀನುಗಾರಿಕೆಗೆ ಹೋಗಿದ್ದು ಅಂದು ಮೀನುಗಾರಿಕೆ ಮುಗಿಸಿ ವಾಪಸ್ಸು ಬರುತ್ತಿರುವಾಗ ಇವರು ಆಯಾ ತಪ್ಪಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು. ಈ ಬಗ್ಗೆ ಭಟ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹುಡುಕಾಡಿದಾಗ ಅ.30ರಂದು ಮಂಜು ಗೌಡ ಅವರ ಮೃತದೇಹವು ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಿರಿಮಂಜೇಶ್ವರ ಕಡಲ ಕಿನಾರೆಯಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
Next Story





