ಕುಂಭಾಶಿ ಭಾಗದಲ್ಲಿ ಚಿರತೆ ಕಾಟ: ಬೋನು ಇಟ್ಟ ಅರಣ್ಯ ಇಲಾಖೆ

ಕುಂದಾಪುರ, ಸೆ.2: ಇಲ್ಲಿಗೆ ಸಮೀಪದ ವಕ್ವಾಡಿ, ಕುಂಭಾಶಿ ಮತ್ತು ಮೂಡುಗೋಪಾಡಿ ಪರಿಸರದಲ್ಲಿ ಚಿರತೆ ಕಾಣಿಸಿಕೊಂಡಿದ್ದು ಸ್ಥಳೀಯರಲ್ಲಿ ಆತಂಕ ಹೆಚ್ಚಿದೆ.
ಮುಸ್ಸಂಜೆಯಾಗುತ್ತಲೆ ಚಿರತೆ ಸಂಚಾರ ಕಂಡುಬರುತ್ತಿದ್ದು ಈ ಪ್ರದೇಶದಲ್ಲಿ ಚಿರತೆ ಓಡಾಡುವ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಚಿರತೆ ಸೆರೆಯಾಗಿದೆ. ತಡರಾತ್ರಿ ಕುಂಭಾಶಿಯ ಸಮೀಪದ ಚಿರತೆ ಪ್ರತ್ಯಕ್ಷಗೊಂಡಿದ್ದು ದೃಶ್ಯಾವಳಿ ಯಲ್ಲಿ ಸೆರೆಯಾಗಿದೆ.
ಸ್ಥಳೀಯರ ಪ್ರಕಾರ ಚಿರತೆ ಈಗಾಗಲೇ ಹಲವು ಸಾಕು ಪ್ರಾಣಿಗಳನ್ನು ಹೊತ್ತೊಯ್ದಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಸಾರ್ವಜನಿಕರ ದೂರಿನ ಮೇರೆಗೆ ಚಿರತೆ ಸೆರೆಗಾಗಿ ಕಳೆದೆರಡು ದಿನಗಳ ಹಿಂದೆ ಬೋನು ಇಡಲಾಗಿದ್ದು ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಕುಂದಾಪುರ ಅರಣ್ಯ ಇಲಾಖೆ ಆರ್‌ಎಫ್‌ಓ ರಾಘವೇಂದ್ರ ಮಾಹಿತಿ ನೀಡಿದ್ದಾರೆ.
Next Story





