ಉಡುಪಿಯಲ್ಲಿ ಸೀರತ್ ಅಭಿಯಾನಕ್ಕೆ ಚಾಲನೆ

ಉಡುಪಿ, ಸೆ.4: ಪ್ರವಾದಿ ಮುಹಮ್ಮದ್(ಸ)ರ ನ್ಯಾಯ ಮತ್ತು ಮಾನವೀಯತೆಯ ಸಂದೇಶಗಳನ್ನು ನಾಡಿನ ಜನತೆಗೆ ತಲುಪಿಸುವ ಮತ್ತು ಪ್ರವಾದಿಯವರ ಬಗೆಗಿನ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಹಾಗೂ ವಿವಿಧ ಧರ್ಮಿಯರ ನಡುವಿನ ಪರಸ್ಪರ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ಸೀರತ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಈ ಪ್ರಯುಕ್ತ ಉಡುಪಿ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಸಾಂತ್ವನ -ಹಣ್ಣು ಹಂಪಲು ವಿತರಣೆ, ವ್ಹೀಲ್ ಚಯರ್ ಮತ್ತು ಇನ್ನಿತರ ಪರಿಕರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ವೈದಾಧಿಕಾರಿ ಡಾ.ಅಶೋಕ್ ಎಚ್., ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು, ಅಭಿಯಾನದ ಸ್ವಾಗತ ಸಮಿತಿಯ ಅಧ್ಯಕ್ಷ ಫೈಝ್ ಆದಿಉಡುಪಿ, ಉಪಾಧ್ಯಕ್ಷ ಖಾಲಿದ್ ಅಬ್ದುಲ್ ಅಝೀಝ್, ಸದಸ್ಯರುಗಳಾದ ಶೇಖ್ ವಾಹಿದ್ ದಾವೂದ್, ಚಾರ್ಲ್ಸ್ ಆಂಬ್ಲರ್, ಇಕ್ಬಾಲ್ ಮನ್ನಾ, ಸುಂದರ್ ಮಾಸ್ಟರ್, ಆಸಿಫ್ ಜಿ.ಡಿ, ಶ್ಯಾಮರಾಜ್ ಬಿರ್ತಿ, ಮುರ್ಶೀ ಶೇಖ್, ದಾನಿಶ್ ಮೌಲಾನಾ, ಮನ್ಸೂರ್ ಸಂತೆಕಟ್ಟೆ, ನವೀದ್, ರಿಯಾಝ್ ಕುಕ್ಕಿಕಟ್ಟೆ, ಪೀರು ಸಾಹೇಬ್, ವಾಜಿದಾ ತಬಸ್ಸುಮ್, ಫರ್ಹತ್ ದಾವೂದ್ ಮೊದಲಾದವರು ಉಪಸ್ಥಿತರಿದ್ದರು.





