ಮನೆಗೆ ನುಗ್ಗಿ ಬೆಳ್ಳಿ ಸೊತ್ತು ಕಳವು: ಪ್ರಕರಣ ದಾಖಲು

ಉಡುಪಿ, ಸೆ.4: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಬೆಳ್ಳಿಯ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಕೊರಂಗ್ರಪಾಡಿ ಎಂಬಲ್ಲಿ ಸೆ.2ರಂದು ರಾತ್ರಿ ವೇಳೆ ನಡೆದಿದೆ.
ಕೊರಂಗ್ರಪಾಡಿಯ ಸುಧಾಕರ ಎಂಬವರ ಪತ್ನಿ ಜೊತೆ ಮನೆಗೆ ಬೀಗ ಹಾಕಿ ಅಬುದಾಬಿಗೆ ಹೋಗಿದ್ದು, ಈ ಮಧ್ಯೆ ಮನೆಯ ಹಿಂಬದಿ ಬಾಗಿಲಿನ ಚಿಲಕ ಮುರಿದು ಒಳಪ್ರವೇಶಿಸಿದ ಕಳ್ಳರು, ಕಪಾಟಿನಲ್ಲಿದ್ದ ಬಟ್ಟೆಗಳೆಲ್ಲಾ ಚೆಲ್ಲಾಪಿಲ್ಲಿ ಮಾಡಿ, ದೇವರ ಮನೆಯಲ್ಲಿದ್ದ ಎರಡು ಬೆಳ್ಳಿ ದೀಪಗಳು ಮತ್ತು ಒಂದು ಬೆಳ್ಳಿಯ ಗಣೇಶ ಮೂರ್ತಿಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಇವುಗಳ ಒಟ್ಟು ಮೌಲ್ಯ 6000ರೂ. ಎಂದು ಅಂದಾಜಿಸಲಾಗಿದೆ. ಸುಧಾಕರ್ ಅಬುದಾಬಿಯಿಂದ ವಾಪಾಸ್ಸು ಬಂದ ಮೇಲೆ ಉಳಿದ ಕಳವಾದ ಸೊತ್ತಿನ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





