ಜ್ಯುವೆಲ್ಲರಿ ಅಂಗಡಿಗಳಲ್ಲಿ ಕಳವಿಗೆ ಯತ್ನ: ಪ್ರಕರಣ ದಾಖಲು

ಕಾರ್ಕಳ: ಕಾರ್ಕಳ ರಥಬೀದಿಯಲ್ಲಿರುವ ಎರಡು ಜ್ಯುವೆಲ್ಲರಿಗೆ ನುಗ್ಗಿ ಕಳವಿಗೆ ಯತ್ನಿಸಿರುವ ಘಟನೆ ಸೆ.5ರಂದು ರಾತ್ರಿ ವೇಳೆ ನಡೆದಿದೆ.
ಹರ್ಷವರ್ಧನ ಆಚಾರ್ಯ ಎಂಬವರ ಕರ್ನಾಟಕ ಜ್ಯುವೆಲ್ಲರಿ ಹಾಗೂ ಪ್ರಕಾಶ್ ಎಂಬವರ ಪ್ರಣವ್ ಜ್ಯುವೆಲ್ಲರಿ ಅಂಗಡಿಗಳಿಗೆ ಅಳವಡಿಸಿದ್ದ ಶಟರ್‌ನ್ನು ಗ್ಯಾಸ್ ಕಟರ್‌ನಿಂದ ಮುರಿದು ಕಳವು ಮಾಡಲು ಯತ್ನಿಸಿರುವುದು ಕಂಡುಬಂದಿದೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





