ಮಂಗಳೂರು ಉತ್ತರ ವಲಯ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟ

ಮಂಗಳೂರು, ಸೆ.11: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮಂಗಳೂರು ಉತ್ತರ ವಲಯ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ತ್ರೋಬಾಲ್ ಪಂದ್ಯಾಟವು ಚೊಕ್ಕಬೆಟ್ಟು ಜಾಮಿಯಾ ವಿದ್ಯಾ ಸಂಸ್ಥೆಯಲ್ಲಿ ಸೆ.9ರಂದು ನಡೆಯಿತು.
ಕಾರ್ಯಕ್ರಮವನ್ನು ಮಂಗಳೂರು ಉತ್ತರ ವಲಯ ದೈಹಿಕ ಶಿಕ್ಷಣ ಶಿಕ್ಷಕ ಪರಿವೀಕ್ಷಣಾಧಿಕಾರಿ ಭರತ್ ಉದ್ಘಾಟಿಸಿ ದರು. ಅಧ್ಯಕ್ಷತೆಯನ್ನು ಜಾಮಿಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಂಶುದ್ದೀನ್ ಐ.ಎಚ್. ವಹಿಸಿದ್ದರು. ಕ್ಲಸ್ಟರ್ ಸಂಪ ನ್ಮೂಲ ವ್ಯಕ್ತಿ ಸಿಕಂದರ್ ಶುಭ ಹಾರೈಸಿದರು. ಕರ್ನಾಟಕ ರಾಜ್ಯ ದೈಹಿಕ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ವಿನೋದ್, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ನಿತಿನ್ ಪುತ್ರನ್, ಶಾಲಾ ಪ್ರಾಂಶುಪಾಲ ಅಬೂಬಕ್ಕರ್ ಐ.ಯು., ಮುಖ್ಯೋಪಾಧ್ಯಾಯನಿ ಪರಮೇಶ್ವರಿ, ಕಾರ್ಯ ದರ್ಶಿ ನವಾಜ್, ಜೊತೆ ಕಾರ್ಯದರ್ಶಿ ಮಾಲಿಕುದ್ದೀನ್, ಕೋಶಾಧಿಕಾರಿ ಬಾವುನ್ನಿ ಮೊಹಮ್ಮದ್, ಸದಸ್ಯರಾದ ನಜೀರ್ ಉಪಸ್ಥಿತರಿದ್ದರು.
ಶಾಲಾ ಪ್ರಾಂಶುಪಾಲ ಅಬೂಬಕರ್ ಐ.ಯು. ಸ್ವಾಗತಿಸಿದರು. ಅಕ್ಷತಾ ವಂದಿಸಿದರು. ಸುರೇಖಾ ಕಾರ್ಯಕ್ರಮ ನಿರೂಪಿಸಿದರು.





