ಶಿರ್ವ ಹದಗೆಟ್ಟ ರಸ್ತೆ ದುರಸ್ತಿಗೆ ಆಗ್ರಹ ಯುವ ಕಾಂಗ್ರೆಸ್‌ನಿಂದ ರಸ್ತೆ ತಡೆದು ಪ್ರತಿಭಟನೆ

ಶಿರ್ವ, ಸೆ.11: ಪಂಜಿಮಾರು-ಶಿರ್ವ-ಪಿಲಾರುಕಾನದ ಹದಗೆಟ್ಟ ರಸ್ತೆಯ ದುರಸ್ತಿಗೆ ಆಗ್ರಹಿಸಿ ಶಿರ್ವ ಯುವ ಕಾಂಗ್ರೆಸ್ ಸಮಿತಿ ಗುರುವಾರ ಶಿರ್ವ ನ್ಯಾರ್ಮ ಸೇತುವೆ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿತು.
ಕಾಂಗ್ರೆಸ್ ಕಾಪು ಬ್ಲಾಕ್ ಅಧ್ಯಕ್ಷ ವೈ.ಸುಕುಮಾರ್ ಮಾತನಾಡಿ, ಇವತ್ತಿನ ಪ್ರತಿಭಟನೆಯ ಫಲವಾಗಿ ಪಂಜಿಮಾರಿ ನಲ್ಲಿ ಹೊಂಡಗಳಿಗೆ ವೆಟ್ ಮಿಕ್ಸ್ ಹಾಕುವ ಕೆಲಸ ಮಾಡುತ್ತಿದ್ದಾರೆ. ಆದರೆ ನಮಗೆ ಅದು ಬೇಡ. ನಮಗೆ ರಸ್ತೆ ದುರಸ್ತಿ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಉಡುಪಿ ಜಿಪಂ ಮಾಜಿ ಸದಸ್ಯ ವಿಲ್ಸನ್ ರೊಡ್ರಿಗಸ್ ಮಾತನಾಡಿ, ಸ್ಥಳೀಯ ಶಾಸಕರು ಅನುದಾನವನ್ನು ತರಿಸಿ ಕೆಲಸ ಕಾರ್ಯಗಳನ್ನು ಮಾಡಬೇಕು. ಅನುದಾನ ಸಿಗದಿದ್ದಲ್ಲಿ ವಿಧಾನಸಭೆಯಲ್ಲಿ ಧರಣಿ ಕುಳಿತು ಕೊಂಡು ಅನು ದಾನ ತರಿಸಿ ರಸ್ತೆಯನ್ನು ಮಾಡಿಕೊಡಬೇಕು ಎಂದು ತಿಳಿಸಿದರು.
ಬಳಿಕ ರಸ್ತೆಯನ್ನು ತಡೆದ ಪ್ರತಿಭಟನಕಾರರು ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಆಗಮಿಸು ವಂತೆ ಪಟ್ಟು ಹಿಡಿದರು. ಶಿರ್ವ ಪೋಲೀಸ್ ಠಾಣಾಧಿಕಾರಿ ಮಂಜುನಾಥ್ ಮರಬದ್ ಪ್ರತಿಭಟನ ಕಾರರನ್ನು ಮನ ವೊಲಿಸಲು ಪ್ರಯತ್ನಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಲೋಕೋಪ ಯೋಗಿ ಇಲಾಖೆಯ ಇಂಜಿನಿಯರ್ ಮಂಜುನಾಥ್ ಪ್ರತಿಭಟನಕಾರರಿಂದ ಮನವಿಯನ್ನು ಸ್ವೀಕರಿಸಿದರು.
ಉಡುಪಿ ಜಿಲ್ಲೆಯಾದ್ಯಂತ ಇಲಾಖೆಯಿಂದ 8 ಕೋಟಿ ರೂ. ಅನುದಾನದಲ್ಲಿ ಕಾಮಗಾರಿಯನ್ನು ಮಾಡಲಾಗಿದೆ. ಮುಖ್ಯವಾಗಿ ರಸ್ತೆಯ ಇಕ್ಕೆಲಗಳಲ್ಲಿ ಇರುವ ನೀರಿನ ಚರಂಡಿಯನ್ನು ದುರಸ್ತಿ ಮಾಡಿ ಮುಖ್ಯರಸ್ತೆಯ ಹೊಂಡಗಳನ್ನು ಒಂದು ವಾರದೊಳಗೆ ತೇಪೆ ಹಾಕಿ ಮುಚ್ಚಲಾಗುವುದು. ಮುಂದೆ ಸರಕಾರದ ಅನುದಾನದಿಂದ ಅಕ್ಟೋಬರ್‌ನಲ್ಲಿ ಡಾಮಾರು ಹಾಕಿ ರಸ್ತೆಯನ್ನು ದುರಸ್ತಿಪಡಿಸಲಾಗುವುದು ಎಂದು ಮಂಜುನಾಥ್ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ತಾಪಂ ಮಾಜಿ ಸದಸ್ಯ ಮೈಕಲ್ ರಮೇಶ್ ಡಿಸೋಜ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶರ್ಪುದ್ದೀನ್ ಶೇಕ್, ಮುಖಂಡರಾದ ಹಸನಬ್ಬ ಶೇಕ್, ರತನ್ ಶೆಟ್ಟಿ, ರಮೇಶ್ ಬಂಗೇರ, ಗೀತಾ ವಾಗ್ಳೆ, ಗ್ರೇಸಿ ಕಾರ್ಡೊಜ, ಗ್ಲಾಡಿಸ್ ಅಲ್ಮೇಡಾ, ಜುಬೇರ್ ಅಲಿ, ಹಸನ್ ಇಬ್ರಾಹಿಂ, ಜೈನುದ್ದೀನ್, ಆಶಾ ಅಂಚನ್, ಕೀರ್ತನ್ ಪೂಜಾರಿ, ಮೊಹಮದ್ ನಿಯಾಝ್, ಗಿರೀಶ್ ಕೋಟ್ಯಾನ್, ಅಬ್ದುಲ್ ಲತೀಫ್, ಅಬ್ದುಲ್ ಅಹಾದ್, ಅರುಣ್ ಪೂಜಾರಿ, ಅಜಯ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಶಿರ್ವ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಮೆಲ್ವಿನ್ ಡಿಸೋಜ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.







