ಕಾರ್ಕಳ : ರೋಟರಿ ರಾಕ್ ಸಿಟಿ ವತಿಯಿಂದ ಶಿಕ್ಷಕರ ದಿನಾಚರಣೆ

ಕಾರ್ಕಳ : ರೋಟರಿ ರಾಕ್ ಸಿಟಿ ಸಂಸ್ಥೆಯ ವಾರದ ಸಭೆಯಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ನಿವೃತ್ತ ಉಪನ್ಯಾಸಕ ಹಿರಿಯಂಗಡಿ ಬಾಲಕೃಷ್ಣ ಶೆಟ್ಟಿಯವರು ಭಾಗವಹಿಸಿ ಸಮಾಜದಲ್ಲಿ ಒಬ್ಬ ನಿಜವಾದ ಶಿಕ್ಷಕನಿಗೆ ಸಿಗುವ ಗೌರವ ಬೇರೆ ಯಾವ ವೃತ್ತಿಯಲ್ಲಿಯೂ ಸಿಗಲು ಸಾಧ್ಯವಿಲ್ಲ, ಇದೊಂದು ಅತ್ಯುನ್ನತ ವೃತ್ತಿ ಎಂದು ನುಡಿದರು.
ಸ್ಥಳೀಯ ಮೂರು ಜನ ಶಿಕ್ಷಕಿಯರನ್ನು ಈ ಸಮಯದಲ್ಲಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ಮಾರ್ಗದರ್ಶಕರಾದ ರೋ ಡಾl ಭರತೇಶ್ ರವರು, ಕಾರ್ಕಳದ ಪಶುವೈದ್ಯ ಡಾl ವಾಸುದೇವ ಪೈ ಹಾಗೂ ಪಿಡಬ್ಲ್ಯೂಡಿ ಸಹಾಯಕ ಇಂಜಿನಿಯರ್ ಸೋಮಶೇಖರ್ ರವರುಗಳನ್ನು ರೋಟರಿ ಪಿನ್ ತೊಡಿಸಿ ಸಂಸ್ಥೆಗೆ ಸೇರಿಸಿಕೊಂಡು ರೋಟರಿಯ ಧ್ಯೇಯೋದ್ದೇಶಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು.
ರೋಟರಿ ಅಧ್ಯಕ್ಷ ರೋl ಸುರೇಂದ್ರ ನಾಯಕ್ ಸ್ವಾಗತಿಸಿದರು, ನಿವೃತ್ತ ಶಿಕ್ಷಕ ಜಗದೀಶ ಹೆಗ್ಡೆ ಹಾಗೂ ರೋl ಚಂದ್ರಶೇಖರ ಹೆಗ್ದೆಯವರು ಸೇರ್ಪಡೆಗೊಂಡ ನೂತನ ಸದಸ್ಯರನ್ನು ಮತ್ತು ಗೌರವಿಸಲ್ಪಟ್ಟ ಶಿಕ್ಷಕಿಯರನ್ನು ಅಭಿನಂದಿಸಿದರು. ರೋl ಸುಬ್ರಹ್ಮಣ್ಯ ಉಪಾಧ್ಯ ನಿರೂಪಣೆ ಮಾಡಿದರು. ವೃತ್ತಿಸೇವಾ ಸಭಾಪತಿ ನಿವೃತ್ತ ಪ್ರಾoಶುಪಾಲರದ ರೋl ಗಣೇಶ ಬರ್ಲಾಯ ವಂದಿಸಿದರು.







