ದೋಣಿ ಸಮೇತ ನೀರಿಗೆ ಬಿದ್ದು ಮೀನುಗಾರ ಮೃತ್ಯು

ಮಲ್ಪೆ, ಸೆ.12: ಮೀನುಗಾರಿಕೆ ಮಾಡುತ್ತಿದ್ದ ಮೀನುಗಾರರೊಬ್ಬರು ದೋಣಿ ಸಮೇತ ಸಮುದ್ರಕ್ಕೆ ಬಿದ್ದು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ರಾಮ (62) ಎಂದು ಗುರುತಿಸಲಾಗಿದೆ. ಇವರು ಸೆ.10ರಂದು ಬೆಳಗ್ಗೆ ಮಲ್ಪೆಯಿಂದ ದೋಣಿಯಲ್ಲಿ ಒಬ್ಬರೇ ಮೀನುಗಾರಿಕೆಗೆ ತೆರಳಿದ್ದು, ವಾಪಾಸು ಬಾರದೇ ನಾಪತ್ತೆಯಾಗಿದ್ದರು. ಸೆ.11ರಂದು ಬೆಳಗ್ಗೆ ಮಲ್ಪೆ ಸಮುದ್ರದ ಲೈಟ್‌ಹೌಸ್ ಬಳಿ ಇವರ ಮೃತ ದೇಹ ದೋಣಿ ಸಮೇತ ಪತ್ತೆಯಾಗಿದೆ. ಇವರು ದೋಣಿಯಲ್ಲಿ ಮೀನುಗಾರಿಕೆಗೆ ಹೋದವರು ದೋಣಿ ಸಮೇತ ನೀರಿಗೆ ಬಿದ್ದು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





