ಸುನ್ನೀ ಕೋ-ಓಡಿನೇಶನ್‌ನಿಂದ ಮೀಲಾದ್ ಜಾಥಾ-ಮೌಲಿದ್ ಮಜ್ಲಿಸ್

ಉಡುಪಿ, ಸೆ.15: ಉಡುಪಿ ಜಿಲ್ಲಾ ಸುನ್ನೀ ಕೋ- ಓಡಿನೇಶನ್ ಸಮಿತಿ ವತಿಯಿಂದ ಲೋಕ ಪ್ರವಾದಿ ಮುಹಮ್ಮದ್ (ಸ) ಅವರ 1500ನೇ ಜನ್ಮದಿನಾಚರಣೆ ಪ್ರಯುಕ್ತ ಅಂಜುಮನ್ ಮಸೀದಿಯಲ್ಲಿ ಮೌಲಿದ್ ಮಜ್ಲಿಸ್ ಮತ್ತು ಉಡುಪಿ ನಗರದಲ್ಲಿ ಮೀಲಾದ್ ಜಾಥಾವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.
ಉಡುಪಿ ಜಿಲ್ಲಾ ಸುನ್ನೀ ಕೋ- ಓಡಿನೇಶನ್ ಸಮಿತಿ ಜಿಲ್ಲಾಧ್ಯಕ್ಷ ಕೆ.ಎ. ಅಬ್ದುರ‌್ರಹ್ಮಾನ್ ರಝ್ವಿ ಕಲ್ಕಟ್ಟ ನೇತೃತ್ವದಲ್ಲಿ ನಡೆದ ಜಾಥಕ್ಕೆ ಸ್ವಾಗತ ಸಮಿತಿ ಅಧ್ಯಕ್ಷ ಅಸ್ಸಯ್ಯಿದ್ ಜುನೈದ್ ಅರ್ರಿಫಾಯಿ ತಂಙಳ್, ಜಿಲ್ಲಾ ಸುನ್ನೀ ಸಂಘಟನೆ ಗಳ ಅಧ್ಯಕ್ಷರುಗಳಿಗೆ ಧ್ವಜವನ್ನು ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.
ಕಾರ್ಕಳ ತ್ವಹಿಬಾ ಗಾರ್ಡನ್ ಪ್ರಾಂಶುಪಾಲ ಅಹ್ಮದ್ ಶರೀಫ್ ಸಅದಿ ಕಿಲ್ಲೂರು ಮಾತನಾಡಿ, ಪ್ರವಾದಿ ಮುಹಮ್ಮದ್ (ಸ)ರ ಜೀವನವೂ ಸರ್ವರಿಗೂ ಮಾದರಿಯಾಗಿದೆ. ಅವರು ಸಾರ್ವತ್ರಿಕ ದರ್ಶನದ ಪ್ರವಾದಿ ಆಗಿದ್ದರು. ಇವತ್ತು ನಡೆಯುತ್ತಿರುವ ಸಕಲ ವಿಷಯಗಳನ್ನು ಅವರು ಹದಿನಾಲ್ಕು ಶತಮಾನಗಳ ಹಿಂದೆಯೇ ತಿಳಿಸಿದ ಮಹಾ ನಾಯಕರು ಎಂದು ಹೇಳಿದರು.
ಹಫೀಝೇ ಮಿಲ್ಲತ್ ಅಕಾಡೆಮಿ ಜಿಲ್ಲಾಧ್ಯಕ್ಷ ಮೌಲಾನಾ ಶೌಕತ್ ರಝ್ವಿ ದುವಾ ನೆರವೇರಿಸಿದರು. ಅಂಜುಮನ್ ಮಸೀದಿಯಲ್ಲಿ ನಡೆದ ಮೌಲಿದ್ ಮಜ್ಲಿಸ್‌ನ ನೇತೃತ್ವವನ್ನು ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ, ಜಿಲ್ಲಾ ಉಲಮಾ ಒಕ್ಕೂಟದ ಅಧ್ಯಕ್ಷ ಬಿ.ಎ.ಇಸ್ಮಾಯಿಲ್ ಮದನಿ ಮಾವಿನಕಟ್ಟೆ, ಸಹಾಯಕ ಖಾಝಿ ಬಿ.ಕೆ.ಅಬ್ದುರ‌್ರಹ್ಮಾನ್ ಮದನಿ ಮೂಳೂರು ವಹಿಸಿದ್ದರು.
ಪ್ರಮುಖರಾದ ಅಬ್ದುಲ್ ಲತೀಫ್ ಫಾಳಿಲಿ ನಾವುಂದ, ಸುಲೈಮಾನ್ ಸಅದಿ ಅಲ್ ಅಫ್ಲಳಿ ಹೊಸ್ಮಾರು, ಮೌಲಾನಾ ಲುಕ್ಮಾನ್ ಮಿಸ್ಬಾಹಿ ಅಹ್ಮದೀ ಮೊಹಲ್ಲ, ಮೌಲಾನಾ ಫಝೀಲತ್ ಹುಸೇನ್ ಕೋಟೇಶ್ವರ, ಮೌಲಾನ ಫೈಯಾಜ್ ರಝಾ ಮುದರಂಗಡಿ, ಶಾಹುಲ್ ಹಮೀದ್ ನಯೀಮಿ ಕನ್ನಂಗಾರು, ಅಬ್ದುರ‌್ರಝಾಕ್ ಖಾಸಿಮಿ ಕಾಪು, ಹಾಫಿಳ್ ಅಶ್ರಫ್ ಸಖಾಫಿ ಮೂಳೂರು, ಬಶೀರ್ ಮದನಿ ಕಟಪಾಡಿ, ಅಬ್ದುರ‌್ರಶೀದ್ ಸಖಾಫಿ ಮಜೂರು, ಹುಸೈನ್ ಸಅದಿ ಹೊಸ್ಮಾರು, ಅಬೂಬಕ್ಕರ್ ಹಾಜಿ ನೇಜಾರು, ಬಿಎಸ್‌ಎಫ್ ರಫೀಕ್, ಸಯ್ಯದ್ ಫರೀದ್, ಇರ್ಷಾದ್ ಸಾಹೇಬ್ ಬಸ್ರೂರು, ಮುಹಮ್ಮದ್ ಗೌಸ್ ಕಾರ್ಕಳ, ಅಡ್ವೇಕೇಟ್ ಹಂಝತ್, ಅಡ್ವೀಕೇಟ್ ಹಬೀಬ್, ಯು.ಜೆ.ಹನೀಫ್, ಇಂಜಿನಿಯರ್ ನಾಸೀರ್ ಬೈಲೂರು, ಅಬ್ದುಲ್ ವಹೀದ್ ಅಂಜುಮನ್, ವಸೀಮ್ ಭಾಷಾ ಕುಂದಾಪುರ, ಅಡ್ವೇಕೇಟ್ ಇಲ್ಯಾಸ್, ವೈ.ಎಂ.ಇಲ್ಯಾಸ್, ಬಿ.ಎಂ.ಮೊಯ್ದಿನ್ ಕಟಪಾಡಿ, ಶೇಖ್ ನಹೀಂ ಕಟಪಾಡಿ, ಅಬ್ದುಲ್ ಹಮೀದ್ ಅದ್ದು ಮೂಳೂರು, ವೈಬಿಸಿ ಬಶೀರ್, ಹಾಜಿ ಎಂ.ಎ.ಬಾವು, ರಖೀಬ್ ಮಾಸ್ಟರ್ ಕನ್ನಂಗಾರು, ಸಿ.ಎಚ್.ಅಬ್ದುಲ್ ಮುತ್ತಲಿ ವಂಡ್ಸೆ, ಶರಫುದ್ದೀನ್ ಕಾಪು, ಅಬ್ಬು ಮುಹಮ್ಮದ್ ಮೂಳೂರು, ಅಬ್ದುಲ್ಲಾ ಸೂಪರ್ ಸ್ಟಾರ್ ಕಾಪು ಮೊದಲಾದವರು ಉಪಸ್ಥಿತರಿದ್ದರು.
ಮೌಲಾನಾ ಮೌಲಾ ಅಲಿ ಅಂಜುಮನ್, ಪಿ.ಪಿ.ಬಶೀರ್ ಮುಸ್ಲಿಯಾರ್ ಮಜೂರು, ಮೌಲಾನಾ ಆದಿಲ್ ರಝಾ ತೆಲ್ಲಾರು ನಾತೇ ಶರೀಫ್ ಹಾಡಿದರು. ಸಂಯೋಜನಾ ಕಾರ್ಯದರ್ಶಿ ಸುಭಾನ್ ಅಹ್ಮದ್ ಹೊನ್ನಾಳ ಸ್ವಾಗತಿಸಿ ದರು. ಸ್ವಾಗತ ಸಮಿತಿ ಸಂಚಾಲಕ ಅಶ್ರಫ್ ಫುರ್ಖಾನಿ ವಂದಿಸಿದರು.







