ಅಂದರ್ ಬಾಹರ್: ಐದು ಮಂದಿ ಆರೋಪಿಗಳ ಬಂಧನ

ಬ್ರಹ್ಮಾವರ, ಸೆ.15: ಬೈಕಾಡಿ ಗ್ರಾಮದ ದೂಪದಕಟ್ಟೆ ಎಂಬಲ್ಲಿ ಸೆ.14ರಂದು ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಐವರನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಶರೀಫ್ ನಧಾಪ್(36), ರವಿ(30), ಯಮನೂರ (45), ಕಾಳಿಂಗಪ್ಪ(26), ಶರಣಪ್ಪ (37) ಎಂದು ಗುರುತಿಸಲಾಗಿದೆ. ಇವರಿಂದ 1800ರೂ. ನಗದು, ಐದು ಮೊಬೈಲ್ ಪೋನ್‌ಗಳು, ನಾಲ್ಕು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





