ಕುಂದಾಪುರದಲ್ಲಿ ಮಾನವ ಸರಪಳಿ -ಸ್ವಚ್ಛತಾ ರ‍್ಯಾಲಿ

ಕುಂದಾಪುರ, ಸೆ.17: ಪೌರಾಡಳಿ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ ನಗರಾಭಿವೃದ್ಧಿ ಕೋಶ ಉಡುಪಿ, ಪುರಸಭೆ ಕುಂದಾಪುರ ಇವರ ಆಶ್ರಯದಲ್ಲಿ ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನ ಸಹಯೋಗ ದೊಂದಿಗೆ ಮಾನವ ಸರಪಳಿ ಮತ್ತು ಸ್ವಚ್ಛತಾ ರ್ಯಾಲಿ, ’ಸ್ವಚ್ಛೋತ್ಸವ’ ಸ್ವಚ್ಛತಾ ಹೀ ಸೇವಾ-2025 ಕಾರ್ಯಕ್ರಮ ಕುಂದಾಪುರದಲ್ಲಿ ಬುಧವಾರ ನಡೆಯಿತು.
ಕುಂದಾಪುರ ತಾಲೂಕು ಪಂಚಾಯತ್ ಬಳಿ ಕಾರ್ಯಕ್ರಮಕ್ಕೆ ಕುಂದಾಪುರ ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ ಚಾಲನೆ ನೀಡಿದರು. ತಾಲೂಕು ಪಂಚಾಯತ್ ಮೂಲಕ ಪ್ರಾರಂಭವಾದ ಸ್ವಚ್ಛತಾ ರ್ಯಾಲಿ ಮುಖ್ಯರಸ್ತೆ ಮೂಲಕ ಪಾರಿಜಾತ ಸರ್ಕಲ್‌ವರೆಗೆ ಸಾಗಿ ಅಲ್ಲಿಂದ ಮುಖ್ಯರಸ್ತೆ ಮೂಲಕ ಶಾಸ್ತ್ರೀ ವೃತ್ತದಲ್ಲಿ ಬಂದು ಸಮಾಪನಗೊಂಡಿತು.
ಬಳಿಕ ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸ ಲಾಯಿತು. ಸ್ವಚ್ಛತೆ ಬಗ್ಗೆ ಪ್ರತಿಜ್ಞಾಧಿ ಬೋಧಿಸ ಲಾಯಿತು. ಪುರಸಭೆಯ ಉಪಾಧ್ಯಕ್ಷೆ ವನಿತಾ ಬಿಲ್ಲವ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ, ಪ್ರಭಾರ ಮುಖ್ಯಾಧಿಕಾರಿ ಸೂರ್ಯಕಾಂತ ಖಾರ್ವಿ, ಕುಂದಾಪುರದ ಪುರಸಭಾ ಇಂಜಿನಿಯರ್(ಪರಿಸರ) ಗುರುಪ್ರಸಾದ್ ಶೆಟ್ಟಿ, ಪುರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.





