ಅಂಚೆ ಜೀವವಿಮೆ ಪ್ರತಿನಿಧಿಗಳ ನೇರ ನೇಮಕಾತಿಗೆ ಸಂದರ್ಶನ

ಉಡುಪಿ, ಸೆ.18: ಉಡುಪಿ ಅಂಚೆ ವಿಭಾಗ ವ್ಯಾಪ್ತಿಯಲ್ಲಿ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವವಿಮೆ ಪ್ರತಿನಿಧಿಗಳ ನೇರನೇಮಕಾತಿಗೆ ಸಂದರ್ಶನವು ಅಕ್ಟೋಬರ್ 9ರಂದು ಬೆಳಗ್ಗೆ 10:30ಕ್ಕೆ ಉಡುಪಿಯ ಪ್ರಧಾನ ಅಂಚೆಕಚೇರಿಯ ಮೊದಲ ಮಹಡಿಯಲ್ಲಿರುವ ಅಂಚೆ ಅಧೀಕ್ಷಕರ ಕಚೇರಿ ಯಲ್ಲಿ ನಡೆಯಲಿದೆ.
ಕನಿಷ್ಠ ಎಸೆಸೆಲ್ಸಿ ಉತ್ತೀರ್ಣರಾದ 18 ವರ್ಷ ಮೇಲ್ಪಟ್ಟ, ಉತ್ತಮ ಸಂವಹನ ಕೌಶಲ್ಯ ಹಾಗೂ ವಿಮಾ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಅರ್ಹರು ಸಂದರ್ಶನ ನಡೆಯುವ ದಿನದಂದು ಅಗತ್ಯ ದಾಖಲಾತಿಗಳೊಂದಿಗೆ ಹಾಜರಾಗ ಬಹುದು. ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಚೆ ಕಚೇರಿ ಅಥವಾ ಅಂಚೆ ಜೀವವಿಮೆ ಅಭಿವೃದ್ಧಿ ಅಧಿಕಾರಿ, ಉಡುಪಿ ಅಂಚೆ ವಿಭಾಗ ಮೊ.ನಂ: 9482914676ನ್ನು ಸಂಪರ್ಕಿಸಬಹುದು ಎಂದು ಉಡುಪಿ ವಿಭಾಗದ ಅಂಚೆ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.
Next Story





