ರೇಖಾ ಚಂದ್ರಗೆ ಪಿಎಚ್‌ಡಿ ಪದವಿ

ಉಡುಪಿ, ಸೆ.19: ಉಡುಪಿ ಎಂ.ಜಿ.ಎಂ. ಕಾಲೇಜಿನ ಗಣಕವಿಜ್ಞಾನ ವಿಭಾಗದ ಮುಖ್ಯಸ್ಥೆ ರೇಖಾ ಎನ್.ಚಂದ್ರ, ಎಂಐಟಿಯ ಪ್ರಾಧ್ಯಾಪಕ ಡಾ.ಲೆವ್ಲಿನ್ ಲೆಸ್ಟರ್‌ರಾಜ್ ರೋಡ್ರಿಗಸ್ ಮಾರ್ಗದರ್ಶನದಲ್ಲಿ ಸಿದ್ದಪಡಿಸಿದ ಎ ಸ್ಟಡಿ ಆಫ್ ಇಫೆಕ್ಟಿವ್ನೆಸ್ ಆಫ್ ನಾಲೆಡ್ಜ್ ಮ್ಯಾನೇಜ್ಮೆಂಟ್ ಸಿಸ್ಟಮ್ಸ್ ಇನ್ ಸಾಫ್ಟ್‌ವೇರ್ ಇಂಡಸ್ಟ್ರೀಸ್ ಎಂಬ ಸಂಶೋಧನಾ ಮಹಾ ಪ್ರಬಂಧಕ್ಕೆ ಕುಪ್ಪಮ್‌ನ ದ್ರಾವಿಡಿಯನ್ ವಿಶ್ವವಿದ್ಯಾನಿಲಯವು ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ.
ಇವರು ಎಸ್‌ಡಿಎಂ ಆಯುರ್ವೇದಿಕ್ ಕಾಲೇಜಿನ ಪ್ರಾಧ್ಯಾಪಕ ಪ್ರೊ.ನವೀನ್‌ಚಂದ್ರ ಎನ್.ಎಚ್. ಅವರ ಪತ್ನಿಯಾಗಿದ್ದು, ಮಂಗಳೂರಿನ ಶರಬತ್ಕಟ್ಟೆಯ ದಿ.ಲೋಕಯ್ಯ ಭಂಡಾರಿ ಹಾಗೂ ದಿ.ಶಕುಂತಲಾರ ಪುತ್ರಿಯಾಗಿದ್ದಾರೆ.
Next Story





