ಪ್ರತ್ಯೇಕ ಪ್ರಕರಣ: ಮೂವರು ಆತ್ಮಹತ್ಯೆ

ಉಡುಪಿ, ಸೆ.19: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ರುಡಾಲ್ಫ್ ಕಾಡ್ವಸ್ (62) ಎಂಬವರು ಸೆ.19ರಂದು ಬೆಳಗ್ಗೆ ಬೆಳಿಗ್ಗೆ ವಸತಿ ಸಮುಚ್ಛಯದ ಬಾಲ್ಕನಿಯ ಗ್ರಿಲ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿರ್ವ: ಮಾನಸಿಕ ಖಿನ್ನತೆಯಿಂದ ಸೆ.8ರಂದು ಮನೆಯಲ್ಲಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಬೆಳ್ಳೆ ಗ್ರಾಮದ ಮೀನಾಕ್ಷಿ ಎಂಬವರ ಮಗಳು ಸುಜಾತಾ(40) ಎಂಬವರು ಸೆ.19ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆ ಯಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ: ವೈಯುಕ್ತಿಕ ಕಾರಣದಿಂದ ಮಾನಸಿಕವಾಗಿ ನೊಂದ ರಾಜೇಶ್(38) ಎಂಬವರು ತಾನು ವಾಸವಿದ್ದ ಬಾಡಿಗೆ ರೂಮಿನಲ್ಲಿ ಸೆ.18ರಂದು ರಾತ್ರಿ ವೇಳೆ ಮೇಲ್ಚಾವಣಿಯ ಕಬ್ಬಿಣದ ಪೈಪ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





