ಡ್ರಗ್ಸ್ ಮಾರಾಟ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಪಡುಬಿದ್ರಿ, ಸೆ.19: ಮಾದಕ ದ್ರವ್ಯ ಮಾರಾಟಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪಡುಬಿದ್ರೆ ಪೊಲೀಸರು ಸೆ.18ರಂದು ಉಚ್ಚಿಲ ಪೊಲ್ಯ ಬಬುಲ್ ಮೈದಾನದ ಬಳಿ ಬಂಧಿಸಿದ್ದಾರೆ.
ಕಾಪು ಫಕೀರನ ಕಟ್ಟೆ ಮಸೀದಿ ಬಳಿ ನಿವಾಸಿ ಫರ್ಹನ್ ಹಾಗೂ ಕೊಂಬಗುಡ್ಡೆಯ ಮೊಹಮ್ಮದ್ ಹಾಶಿಂ ಬಂಧಿತ ಆರೋಪಿಗಳು. ಇವರಿಂದ 9.30 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತು, ಬೈಕ್, ಎರಡು ಮೊಬೈಲ್ ಮತ್ತು 5,000ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





