ಉಡುಪಿ ವೆಲ್ಫೇರ್ ಸೊಸೈಟಿಯ ಮಹಾಸಭೆ

ಉಡುಪಿ, ಸೆ.24: ಇಸ್ಲಾಮಿಕ್ ವೆಲ್ಫೇರ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಉಡುಪಿ ಇದರ ವಾರ್ಷಿಕ ಮಹಾಸಭೆಯು ಸೆ.23ರಂದು ಉಡುಪಿ ಜಾಮಿಯಾ ಮಸೀದಿಯ ಸಭಾಂಗಣದಲ್ಲಿ ನಡೆಯಿತು.
ಸೊಸೈಟಿಯ ಅಧ್ಯಕ್ಷ ರಿಯಾಝ್ ಅಹ್ಮದ್ ಕುಕ್ಕಿಕಟ್ಟೆ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸಾಮಾಜಿಕ ಕಾರ್ಯಕರ್ತ ಯಾಸೀನ್ ಕೋಡಿಬೆಂಗ್ರೆ ಸಂದರ್ಭೋಚಿತವಾಗಿ ಮಾತನಾಡಿದರು. ಮುಖ್ಯ ಸಲಹೆಗಾರ ನರಸಿಂಹ ಸ್ವಾಮಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ಆರೀಫ್ ಕಾಶಿಮ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ನಿಸಾರ್ ಅಹ್ಮದ್ ಲೆಕ್ಕ ಪರಿಶೋ ಧಕರ ನೇಮಕ ಪ್ರಕ್ರಿಯೆ ನಡೆಸಿಕೊಟ್ಟರು. ಸೊಸೈಟಿಯ ನಿರ್ದೇಶಕ ಅನ್ವರ್ ಅಲಿ ಕಾಪು ವಾರ್ಷಿಕ ವರದಿಯನ್ನು ವಾಚಿಸಿದರು. ನಿರ್ದೇಶಕ ರಯೀಸ್ ಅಹ್ಮದ್ ಮಹಾಸಭೆಯ ಆಮಂತ್ರಣ ಪತ್ರಿಕೆ ಓದಿ ದಾಖಲಿಸಿದರು.
ಮೌಲಾನಾ ದಾನಿಶ್ ಪ್ರಾರ್ಥನೆ ನಿರ್ವಹಿಸಿದರು. ನಿರ್ದೇಶಕ ಜಿ. ಶುಐಬ್ ಅಹ್ಮದ್ ಮಲ್ಪೆ ಸ್ವಾಗತಿಸಿದರು. ನಿರ್ದೇಶಕ ಇಸ್ಹಾಕ್ ಕಿದೆವರ್ ವಂದಿಸಿದರು. ನಿರ್ದೇಶಕ ಜಿ.ಎಂ.ಶರೀಫ್ ಹೂಡೆ ಕಾರ್ಯಕ್ರಮ ನಿರೂಪಿಸಿದರು.
Next Story





