ಮಲಬಾರ್ ಗೋಲ್ಡ್‌ನಿಂದ ‘ಡೈಮಂಡ್ ಮಂಗಳ ಸೂತ್ರ ಫೆಸ್ಟಿವಲ್’

ಉಡುಪಿ, ಸೆ.27: ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ ‘ಡೈಮಂಡ್ ಮಂಗಳ ಸೂತ್ರ ಫೆಸ್ಟಿವಲ್’ ಶುಕ್ರವಾರ ಉಡುಪಿ ಶಾಖೆಯಲ್ಲಿ ನಡೆಯಿತು.
ಗ್ರಾಹಕರಾದ ಡಾ.ವನಿತಾ ಗುರುದತ್ ಹಾಗೂ ಪ್ರಶೀಲ ಡೈಮಂಡ್ ಮಂಗಳ ಸೂತ್ರವನ್ನು ಅನಾವರಣಗೊಳಿಸಿ ದರು. ಡಾ.ವನಿತಾ ಗುರುದತ್ ಮಾತನಾಡಿ, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಮಳಿಗೆಯಲ್ಲಿ ಗ್ರಾಹಕರಿಗೆ ಬೇಕಾದಂತಹ ಚಿನ್ನ ವಜ್ರಾಭರಣಗಳಿವೆ. ಗ್ರಾಹಕರಿಗೆ ಸೌಲಭ್ಯವನ್ನು ಉತ್ತಮವಾಗಿ ನೀಡುತ್ತಾರೆ. ವಿವಿಧ ಬಗೆಯ ಚಿನ್ನ, ವಜ್ರಾಭರಣಗಳು ಈ ಮಳಿಗೆಯಲ್ಲಿ ಇದ್ದು, ಎಲ್ಲಾ ರೀತಿಯ ಗ್ರಾಹಕರಿಗೆ ಅನುಕೂಲಕ್ಕೆ ತಕ್ಕಂತೆ ಚಿನ್ನ, ವಜ್ರಾಭರಣಗಳು ಇಲ್ಲಿವೆ ಎಂದರು.
ಪ್ರಶೀಲ ಮಾತನಾಡಿ, ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಹೊಸತನದ ಮೂಲಕ ವಜ್ರಾಭರಣಗಳನ್ನು ಗ್ರಾಹಕರಿಗೆ ಪರಿಚಯಿಸುವುದು ಇವರ ವಿಶೇಷತೆಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿ ಸಮೀರ್ ಮಂಗಳ ಸೂತ್ರ ಫೆಸ್ಟಿವಲ್ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಿ, ವಜ್ರಾಭರಣಗಳ ಮೇಲೆ ಶೇ.30ರವರೆಗೆ ರಿಯಾಯಿತಿ, ಚಿನ್ನಾಭರಣ ಮೇಕಿಂಗ್ ಚಾರ್ಜ್ ಮೇಲೆ ಶೆ.30ರವರೆಗೆ ರಿಯಾಯಿತಿ ಪಡೆಯಬಹುದು. ಈ ಫೆಸ್ಟಿವಲ್ ಅ.31ರವರೆಗೆ ನಡೆಯಲಿದೆ ಎಂದು ತಿಳಿಸಿದರು.
ಶಾಖಾ ವ್ಯವಸ್ಥಾಪಕ ಪುರಂದರ ತಿಂಗಳಾಯ, ಮಾರುಕಟ್ಟೆ ಮುಖ್ಯಸ್ಥ ತಂಝಿಮ್ ಶಿರ್ವ, ಡೈಮಂಡ್ ಮುಖ್ಯಸ್ಥರಾದ ಹರೀಶ್ ಎಂ.ಜಿ., ಸಂದೀಪ್, ದಿವ್ಯಾ ಉಪಸ್ಥಿತರಿದ್ದರು. ಸಿಬ್ಬಂದಿ ವಿಘ್ನೇಶ್ ಕಾರ್ಯಕ್ರಮ ನಿರೂಪಿಸಿ, ನಿತ್ಯಾನಂದ ನಾಯಕ್ ವಂದಿಸಿದರು.







