ಉಡುಪಿ ಜಿಲ್ಲಾ ಮಟ್ಟದ ಎಸ್‌ಡಿಎಂಸಿ ಶಿಕ್ಷಕ-ಶಾಲೆ ಪ್ರಶಸ್ತಿ ಪ್ರಕಟ

ಕುಂದಾಪುರ, ಸೆ.29: ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ಕೇಂದ್ರ ವೇದಿಕೆಯ ನೂತನ ಜಿಲ್ಲಾ ಕಛೇರಿಯನ್ನು ಕೋಟೇಶ್ವರ ರಥಬೀದಿಯ ಶಾರದ ಕಲ್ಯಾಣ ಮಂಟಪದ ಕಾಂಪ್ಲೆಕ್ಸ್‌ನಲ್ಲಿ ಕೋಟೇಶ್ವರ ಗೀತಾ ಎಚ್.ಎಸ್.ಎನ್ ಫೌಂಡೇಶನ್‌ನ ಕೋಶಾಧಿಕಾರಿ ರಾಮ ಅಡಿಗ ಸೋಮವಾರ ಉದ್ಘಾಟಿಸಿದರು.
ಉಡುಪಿ ಜಿಲ್ಲಾ ಮಟ್ಟದ ಅತ್ಯುತ್ತಮ ಎಸ್‌ಡಿಎಂಸಿ ಶಿಕ್ಷಕ ಮತ್ತು ಶಾಲೆಯ ಪ್ರಶಸ್ತಿ ಪಟ್ಟಿಯನ್ನು ಕೋಟೇಶ್ವರ ಗೀತಾ ಎಚ್‌ಎಸ್‌ಎನ್ ಫೌಂಡೇಶನ್‌ನ ಅಧ್ಯಕ್ಷ, ಎಸ್.ಡಿ.ಎಂ.ಸಿ ಸಮನ್ವಯ ಕೇಂದ್ರ ವೇದಿಕೆ ಉಡುಪಿ ಜಿಲ್ಲಾ ಘಟಕದ ಮಹಾಪೋಷಕ ಶಂಕರ್ ಐತಾಳ್ ಬಿಡುಗಡೆಗೊಳಿಸಿದರು. ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು ವಹಿಸಿದ್ದರು.
ಜಿಲ್ಲಾ ಮಟ್ಟದ ಅತ್ಯುತ್ತಮ ಎಸ್‌ಡಿಎಂಸಿ ಅಧ್ಯಕ್ಷ ಪ್ರಶಸ್ತಿಯನ್ನು ಹೆಸ್ಕುತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೃಷ್ಣ ಕೆದಲಾಯ, ಜಿಲ್ಲಾ ಮಟ್ಟದ ಅತ್ಯುತ್ತಮ ಎಸ್.ಡಿ.ಎಂ.ಸಿ ಶಿಕ್ಷಕ ಪ್ರಶಸ್ತಿಯನ್ನು ಡಾ.ಕಿಶೋರ್ ಕುಮಾರ್ ಶೆಟ್ಟಿ, ಮೋಹನ್ ಕಡಬ, ತನುಜಾಕ್ಷಿ, ತಾರದೇವಿ, ವೆಂಕಟ, ರೋಶನ್ ಬೀಬಿ, ಜಯಶ್ರೀ, ರವಿ ಎಸ್.ಪೂಜಾರಿ, ಬಾಲಕೃಷ್ಣ ಶೆಟ್ಟಿ, ವಸಂತಿ ದಾಸ್. ಜಯ ಮೊಯಿಲಿ, ಸುಬ್ರಹ್ಮಣ್ಯ ಉಪಾಧ್ಯ ಬಿ., ಕೃಷ್ಣ ನಾಯ್ಕ್, ಆಶಾಲತಾ ಅವರನ್ನು ಅಯ್ಕೆ ಮಾಡಲಾಯಿತು.
ಜಿಲ್ಲಾ ಮಟ್ಟದ ಅತ್ಯುತ್ತಮ ಎಸ್‌ಡಿಎಂಸಿ ಶಾಲೆ ಪ್ರಶಸ್ತಿಯನ್ನು ಕಾಜಾರಗುತ್ತು ಹಿರಿಯ ಪ್ರಾಥಮಿಕ ಶಾಲೆ ಉಡುಪಿ ವಲಯ, ಅಮಾಸೆಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂದಾಪುರ ವಲಯ, ಮಣೂರು -ಪಡುಕೆರೆ ಸರಕಾರಿ ಸಂಯುಕ್ತ ಪ್ರೌಢಶಾಲೆ ಬ್ರಹ್ಮಾವರ ವಲಯ, ಅಚ್ಚಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಪು ವಲಯ, ಮಾವಿನಕಟ್ಟೆ ಸರಕಾರಿ ಪ್ರಾಥಮಿಕ ಶಾಲೆ ಕುಂದಾಪುರ ವಲಯ, ಪೆರ್ವಾಜೆ ಸುಂದರ ಪುರಾಣಿಕ ಸಂಯುಕ್ತ ಪ್ರೌಢಶಾಲೆ ಕಾರ್ಕಳ ವಲಯ ಅವರನ್ನು ಆಯ್ಕೆ ಮಾಡಲಾಯಿತು.
ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯ ಜಿಲ್ಲಾ ಸಮಿತಿಯ ಗೌರವ ಸಲಹೆಗಾರರಾದ ಮಲ್ಲಿಕಾ, ಹೆಸ್ಕುತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಶೇಖರ್ ಉಪಸ್ಥಿತರಿದ್ದರು. ವೇದಿಕೆ ಜಿಲ್ಲಾ ಕಾರ್ಯ ದರ್ಶಿ ದೀಪಾ ಜಪ್ತಿ ಕಾರ್ಯಕ್ರಮ ನಿರೂಪಿಸಿದರು. ಕುಂದಾಪುರ ತಾಲೂಕು ಘಟಕದ ಕಾರ್ಯದರ್ಶಿ ಪ್ರಮೋದಾ ಕುಶಲ್ ಶೆಟ್ಟಿ ಸ್ವಾಗತಿಸಿ, ಪುರಸಭಾ ಘಟಕದ ಕಾರ್ಯದರ್ಶಿ ವರದಾ ಸುಧಾಕರ್ ಆಚಾರ್ಯ ವಂದಿಸಿದರು.







