ಮೈಸೂರು ಜಂಬೂ ಸವಾರಿ ಮೆರವಣಿಗೆ: ಉಡುಪಿಯ ಹುಲಿವೇಷ ತಂಡ ಪ್ರಥಮ

ಉಡುಪಿ, ಅ.4: ದಸರಾ ಮಹೋತ್ಸವ-2025ರ ಅಂಗವಾಗಿ ಅ.2ರಂದು ಮೈಸೂರಿನಲ್ಲಿ ನಡೆದ ವಿಶ್ವ ವಿಖ್ಯಾತ ಜಂಬೂ ಸವಾರಿ ಮೆರವಣಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಉಡುಪಿ ಜಿಲ್ಲೆಯ ನಾಗರಾಜ್ ಐತಾಳ್ ನೇತೃತ್ವದ ಪಡುಬೈಲೂರಿನ ಇಷ್ಟ ಮಹಾಲಿಂಗೇಶ್ವರ ಹುಲಿವೇಷ ತಂಡವು ಪ್ರಥಮ ಸ್ಥಾನ ಗಳಿಸಿದ್ದು 15,000 ರೂ ನಗದು ಬಹುಮಾನ ಪಡೆದಿದೆ ಎಂದು ಮೈಸೂರು ದಸರಾ- 2025ರ ಮೆರವಣಿಗೆ ಮತ್ತು ಪಂಜಿನ ಕವಾಯತು ಉಪಸಮಿತಿ ಉಪಶೇಷಾಧಿಕಾರಿ ಸೀಮಾ ಲಾಟ್ಕರ್ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
Next Story





