ಹೃದಯಾಘಾತದಿಂದ ರಿಕ್ಷಾ ಚಾಲಕ ಮೃತ್ಯು

ಕಾರ್ಕಳ, ಅ.4: ರಿಕ್ಷಾ ಚಲಾಯಿಸುತ್ತಿದ್ದ ಚಾಲಕರೊಬ್ಬರು ಎದೆನೋವಿ ನಿಂದ ಮೃತಪಟ್ಟ ಘಟನೆ ಅ.3ರಂದು ಮಧ್ಯಾಹ್ನ ವೇಳೆ ಕಾರ್ಕಳ ಟಿಎಂಎ ಪೈ ಆಸ್ಪತ್ರೆಯ ಎದುರುಗಡೆ ನಡೆದಿದೆ.
ಮೃತರನ್ನು ಕಾರ್ಕಳ ತೆಳ್ಳಾರ್ ರಸ್ತೆಯ ನಿವಾಸಿ ಪ್ರಕಾಶ್ಚಂದ್ರ(55) ಎಂದು ಗುರುತಿಸಲಾಗಿದೆ. ಇವರು ಅತ್ತೂರಿ ನಿಂದ ಕ್ರಿಯೇಟಿವ್ ಕಾಲೇಜಿನ ಕಡೆಗೆ ಬಾಡಿಗೆಗೆ ಹೋಗುತ್ತಿದ್ದು, ಈ ವೇಳೆ ಎದೆನೋವು ಕಾಣಿಸಿಕೊಂಡಿತ್ತೆನ್ನಲಾ ಗಿದೆ. ಕೂಡಲೇ ಇವರು ತಾನು ಚಲಾಯಿಸುತ್ತಿದ್ದ ರಿಕ್ಷಾವನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ಕುಸಿದು ಬಿದ್ದು ಮೃತಪಟ್ಟ ರೆಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





