ಹುಲಿವೇಷಧಾರಿಗೆ ತಂಡದಿಂದ ಹಲ್ಲೆ: ಪ್ರಕರಣ ದಾಖಲು

ಗಂಗೊಳ್ಳಿ, ಅ.4: ಹುಲಿವೇಷ ಹಾಕಿ ಹಣ ಮಾಡುತ್ತಿರುವುದಾಗಿ ಆರೋಪಿಸಿ ಹುಲಿವೇಷಧಾರಿಗೆ ತಂಡವೊಂದು ಹಲ್ಲೆ ನಡೆಸಿರುವ ಘಟನೆ ಅ.3ರಂದು ಸಂಜೆ ವೇಳೆ ತ್ರಾಸಿಯಲ್ಲಿ ನಡೆದಿದೆ.
ಗಂಗೊಳ್ಳಿ ಗ್ರಾಮದ ಬಾವಿಕಟ್ಟೆಯ ಸುದರ್ಶನ್ ತ್ರಾಸಿ ವಿನಾಯಕ್ ಬಸ್ ಬಾಡಿ ಬಿಲ್ಡರ್ ಕಂಪನಿಗೆ ಹುಲಿ ವೇಷ ಕುಣಿಯಲೆಂದು ತಮ್ಮ ಹುಲಿ ವೇಷ ತಂಡದೊಂದಿಗೆ ಹೋಗಿದ್ದು, ಅಲ್ಲಿರುವ ಇಬ್ಬರು ಮಕ್ಕಳು ಸುದರ್ಶನ್ ಅವರನ್ನು ತಡೆದು ಹೊರಗೆ ಹೋಗುವಂತೆ ತಳ್ಳಿದ್ದು, ನಂತರ ಅಲ್ಲಿ ಕೆಲಸ ಮಾಡಿಕೊಂಡಿರುವ 8-10 ಜನರು ಸೇರಿ ಕೊಂಡು ಸ್ಟೀಲ್ ರಾಡ್‌ನಿಂದ ಸುದರ್ಶನ್‌ಗೆ ಹಲ್ಲೆ ಮಾಡಿ ಅವಾಚ್ಯ ಶಬ್ದದಿಂದ ಬೈದು ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ.
‘ನೀವು ಹುಲಿವೇಷ ಧರಿಸಿ ಹಣ ಮಾಡುವ ಉದ್ದೇಶದಿಂದ ಇಲ್ಲಿಗೆ ಬೇಡಲು ಬಂದಿರುತ್ತೀರಿ. ಇನ್ನೂ ಮುಂದೆ ಬಂದರೆ ನಿಮ್ಮನ್ನು ಕೊಲ್ಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಸುದರ್ಶನ್ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





