ನವಜೀವನ ಲೇ ಕೌನ್ಸಿಲರ್ ತರಬೇತಿ ಕಾರ್ಯಾಗಾರ

ಉಡುಪಿ, ಅ.5: ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆ, ಕಮಲ್ ಎ.ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ ಮತ್ತು ಒನ್ ಗುಡ್ ಸ್ಟೆಪ್ ಇದರ ಜಂಟಿ ಆಶ್ರಯದಲ್ಲಿ ನವಜೀವನ ಲೇ ಕೌನ್ಸಿಲರ್‌ನ 7ನೇ ತರಬೇತಿ ಕಾರ್ಯಾಗಾರದ ಉದ್ಘಾಟನೆಯನ್ನು ಅಂಕಣಕಾರ, ಆಪ್ತ ಸಮಾ ಲೋಚಕ ಎನ್.ವಿ.ಕಾಮತ್ ರವಿವಾರ ನೆರವೇರಿಸಿದರು.
ಅಧ್ಯಕ್ಷತೆಯನ್ನು ಡಾ.ಎ.ವಿ.ಬಾಳಿಗ ಸಮೂಹ ಸಂಸ್ಥೆಗಳ ವೈದ್ಯಕೀಯ ನಿರ್ದೇಶಕ ಡಾ.ಪಿ.ವಿ.ಭಂಡಾರಿ ವಹಿಸಿದ್ದರು. ವೇದಿಕೆಯಲ್ಲಿ ಆಸ್ಪತ್ರೆಯ ಮನೋವೈದ್ಯ ಡಾ.ದೀಪಕ್ ಮಲ್ಯ ಉಪಸ್ಥಿತರಿದ್ದರು.
ನವಜೀವನ ಲೇ ಕೌನ್ಸಿಲರ್‌ನ ತರಬೇತಿ ಕಾರ್ಯಾಗಾರದ ಸಂಯೋಜಕಿ ಮತ್ತು ಆಸ್ಪತ್ರೆಯ ಆಡಳಿತ ಅಧಿಕಾರಿ ಸೌಜನ್ಯ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿ ಸ್ವಾಗತಿಸಿದರು. ಆಪ್ತ ಸಮಾಲೋಚಕ ದೀಪಶ್ರೀ ಕಾರ್ಯ ಕ್ರಮ ನಿರೂಪಿಸಿದರು. ಅನಿಲ್ ಐ.ಕೆ. ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ತರಬೇತಿಯ ಮೊದಲ ತರಗತಿಯು ನಡೆಯಿತು. ಮಾನಸಿಕ ಕಾಯಿಲೆಗಳ ಕುರಿತ 12 ವಾರಗಳ ಈ ತರಬೇತಿಯ ಪ್ರಯೋಜನವನ್ನು 25ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪಡೆದುಕೊಳ್ಳಲಿದ್ದಾರೆ.





