ವಿಶ್ವ ಮಾನಸಿಕ ಆರೋಗ್ಯ ಜಾಗೃತಿ-ಉತ್ತಮ ನಡವಳಿ ಸಪ್ತಾಹ ಉದ್ಘಾಟನೆ

ಉಡುಪಿ, ಅ.5: ಲಯನ್ಸ್ ಜಿಲ್ಲೆ 317ಸಿ, ಕಮಲ್ ಎ ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ, ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಹಾಗೂ ಇಂಡಿಯನ್ ಸೈಕಿಯಾ ಟ್ರಿಕ್ ಸೊಸೈಟಿ ಕರ್ನಾಟಕ ಚಾಪ್ಟರ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರ ಣೆಯ ಪ್ರಯುಕ್ತ ವಿಶ್ವ ಮಾನಸಿಕ ಆರೋಗ್ಯ ಜಾಗೃತಿ ಮತ್ತು ಉತ್ತಮ ನಡವಳಿ ಸಪ್ತಾಹದ ಉದ್ಘಾಟನಾ ಕಾರ್ಯ ಕ್ರಮವನ್ನು ಅಭಯ ಪುನರ್ವಸತಿ ಕೇಂದ್ರದಲ್ಲಿ ಶನಿವಾರ ಆಯೋಜಿಸಲಾಗಿತ್ತು.
9 ದಿನಗಳ ಕಾಲ ನಿರಂತರವಾಗಿ ನಡೆಯುವ ಈ ಸರಣಿ ಕಾರ್ಯಕ್ರಮ ವನ್ನು ಲಯನ್ಸ್ ಜಿಲ್ಲಾ ಗವರ್ನರ್ ಸ್ವಪ್ನಾ ಸುರೇಶ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಇಂಡಿಯನ್ ಸೈಕ್ಯಾಟ್ರಿಕ್ ಸೊಸೈಟಿ ಕರ್ನಾಟಕ ಚಾಪ್ಟರ್‌ನ ಅಧ್ಯಕ್ಷ ಡಾ.ಅನಿಲ್ ಕುಮಾರ್ ಎಂ.ಎನ್., ಡಾ.ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಪಿ.ವಿ. ಭಂಡಾರಿ, ಮೆಂಟಲ್ ಹೆಲ್ತ್ ಅಂಡ್ ವೆಲ್ ಬೀಯಿಂಗ್ ವೀಕ್‌ನ ಸಂಯೋಜಕ ಡಾ.ಎಚ್.ಗಣೇಶ್ ಪೈ, ಲಯನ್ಸ್ ಗ್ಲೋಬಲ್ ಸರ್ವಿಸ್ ಟೀಮ್‌ನ ಕೇಶವ್ ಅಮೀನ್ ಶುಭ ಕೋರಿದರು.
ಅಧ್ಯಕ್ಷತೆಯನ್ನು ಮಣಿಪಾಲ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ನಿಶಾಂತ ಭಟ್ ವಹಿಸಿದ್ದರು. ಲಯನ್ಸ್ ಕ್ಲಬ್ ಪ್ರಾಂತೀಯ ಮುಖ್ಯಸ್ಥ ಸುದರ್ಶನ್ ನಾಯಕ್ ಉಪಸ್ಥಿತರಿದ್ದರು.
ಉಡುಪಿ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆಯ ಆಡಳಿತ ಅಧಿಕಾರಿ ಸೌಜನ್ಯ ಶೆಟ್ಟಿ ಸ್ವಾಗತಿಸಿದರು. ಪದ್ಮ ರಾಘವೇಂದ್ರ ವಂದಿಸಿದರು. ನಂತರ ಅಭಯ ಪುನರ್ವಸತಿ ಕೇಂದ್ರ ಹಾಗೂ ಬಂಧು ದೀರ್ಘಕಾಲಿನ ಮಾನಸಿಕ ರೋಗಿಗಳ ಹಗಲು ಆರೈಕೆ ಕೇಂದ್ರದ ಸದಸ್ಯರುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.





