ಸಿಜೆಐ ಮೇಲೆ ಶೂ ಎಸೆಯುವ ಯತ್ನ ದೇಶದ ಸಂವಿಧಾನದ ಮೇಲೆ ನಡೆದ ದಾಳಿ: ಶ್ಯಾಮರಾಜ್ ಬಿರ್ತಿ

ಶ್ಯಾಮರಾಜ್ ಬಿರ್ತಿ
ಉಡುಪಿ, ಅ.6: ಸುಪ್ರೀಂಕೋರ್ಟಿನ ಕೋರ್ಟ್ ಕಲಾಪ ನಡೆಯುತ್ತಿರುವ ಸಂದರ್ಭದಲ್ಲೇ ವಕೀಲನೊಬ್ಬ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮೇಲೆ ಶೂ ಎಸೆಯಲು ಯತ್ನಿಸಿರುವುದು ತೀವ್ರ ಖಂಡನೀಯ. ಇದು ಭಾರತದ ಸಂವಿಧಾನದ ಮೇಲೆ ನಡೆದ ದಾಳಿಯಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಇದರ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ತಿಳಿಸಿದ್ದಾರೆ.
ಈ ಸನಾತನಿಗಳು ಅಂದು ಸ್ವಾತಂತ್ರ ಸಿಕ್ಕಿದಾಗಲೇ ನಮ್ಮ ದೇಶದ ಸಂವಿಧಾನವನ್ನು ವಿರೋಧಿಸಿದ್ದರು. ಮನುಸ್ಮತಿಯನ್ನು ತಮ್ಮ ಸಂವಿಧಾನ ವಾಗಿ ಮಾಡಲು ಹೊರಟಿರುವ ಈ ಹಿಂದುತ್ವವಾದಿಗಳು ಪದೇ ಪದೇ ಈ ರೀತಿಯ ಕೆಲಸ ಮಾಡುತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಅಹಿಂಸವಾದಿ , ರಾಷ್ಟ್ರಪಿತ ಗಾಂದೀಜಿಯ ವರನ್ನೇ ಕೊಂದ ಈ ಸನಾತನಿಗಳು ತಾವು ಸತಾನನ ಸಂತಾನದವರೆಂದು ಸಾಬೀತು ಪಡಿಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿಯ ಪೀಠದಲ್ಲಿ ಕೂತು ದಲಿತನೊಬ್ಬ ನ್ಯಾಯ ಕೊಡುವುದನ್ನು ಈ ವೈದಿಕಶಾಹಿ ಮನಸ್ಥಿತಿ ಒಪ್ಪಿಕೊಳ್ಳುವುದಿಲ್ಲ. ಗಾಂಧಿ ಯನ್ನು ಕೊಂದ ನಾಥುರಾಮ್ ಗೋಡ್ಸೆಯನ್ನು ಪೂಜೆ ಮಾಡುವ, ಗೋಡ್ಸೆಗೆ ಗುಡಿ ಕಟ್ಟುವ ಈ ಸನಾತನಿಗಳ ಕೆಟ್ಟ ಸಂಸ್ಕೃತಿಯನ್ನು ಈ ಘಟನೆಗಳು ಬಿಂಬಿಸುತ್ತವೆ. ಸಂವಿಧಾನದ ಆಶಯಗಳ ಮೇಲೆ ದಾಳಿ ಮಾಡುವ ಈ ದೇಶ ದೊ್ರೀೀಹಿಯನ್ನು ಯುಎಪಿಎ ಕಾಯ್ದೆಯಡಿ ಬಂಧಿಸಿ ಸರಿಯಾದ ಶಿಕ್ಷೆಗೆ ಗುರಿಪಡಿ ಬೇಕೆಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.





