ಚಿನ್ನದ ಸರ ಕಳವು ಪ್ರಕರಣ: ಆರೋಪಿ ಬಂಧನ

ಕೋಟ, ಅ.6: ಮನೆಯಲ್ಲಿದ್ದ ಚಿನ್ನದ ಸರ ಕಳವು ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.
ಯಡಾಡಿ ಮತ್ಯಾಡಿ ಗ್ರಾಮದ ಗುಡ್ಡಿಯಂಗಡಿಯ ಬಸವ ಪೂಜಾರಿ ಎಂಬವರ ಮನೆಯ ಕಾಪಾಟಿನಲ್ಲಿದ್ದ 1,45,000 ರೂ. ಮೌಲ್ಯದ 18 ಗ್ರಾಂ ತೂಕದ ಚಿನ್ನದ ಸರ ಸೆ.26ರ ಸಂಜೆಯಿಂದ 27ರ ಬೆಳಗ್ಗಿನ ಮಧ್ಯಾವಧಿಯಲ್ಲಿ ಕಳ ವಾಗಿತ್ತು. ಈ ಬಗ್ಗೆ ಕೋಟ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದ ಕೋಟ ಎಸ್ಸೈಗಳಾದ ಪ್ರವೀಣ ಕುಮಾರ್, ಸುಧಾಪ್ರಭು ಹಾಗೂ ಸಿಬ್ಬಂದಿಗಳು ಆರೋಪಿ ಶಿರಿಯಾರ ನಿವಾಸಿ ಆನಂದ(26) ಎಂಬಾತನನ್ನು ಬಂಧಿಸಿ, ಚಿನ್ನದ ಸರವನ್ನು ವಶಪಡಿಸಿ ಕೊಂಡಿದ್ದಾರೆ.
Next Story





