ಉಡುಪಿ: ವಿವಿಧ ಪೊಲೀಸ್ ನಿರೀಕ್ಷಕರ ವರ್ಗಾವಣೆ

ಉಡುಪಿ, ಅ.7: ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ನಿರೀಕ್ಷಕರನ್ನು ವರ್ಗಾವಣೆಗೊಳಿಸಿ ಸರಕಾರ ಆದೇಶ ನೀಡಲಾಗಿದೆ.
ಕುಂದಾಪುರ ನಗರ ಪೊಲೀಸ್ ಠಾಣೆಯಲ್ಲಿ ಕಳೆದ ಕೆಲವಾರು ತಿಂಗಳಿನಿಂದ ಖಾಲಿ ಇದ್ದ ಪೊಲೀಸ್ ನಿರೀಕ್ಷಕರ ಹುದ್ದೆಗೆ ಜಯರಾಮ್ ಡಿ. ಗೌಡ ಅವರನ್ನು ನೇಮಿಸಲಾಗಿದೆ. ಇವರು ಕುಂದಾಪುರ ವೃತ್ತದ ಪೊಲೀಸ್ ವೃತ್ತನಿರೀಕ್ಷಕ ರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕುಂದಾಪುರ ಪೊಲೀಸ್ ವೃತ್ತನಿರೀಕ್ಷಕರಾಗಿ ಸಂತೋಷ್ ಕಾಯ್ಕಿಣಿ ಅವರನ್ನು ನೇಮಿಸಲಾಗಿದ್ದು ಇವರು ಪ್ರಸ್ತುತ ಮುರ್ಡೇಶ್ವರ ವೃತ್ತನಿರೀಕ್ಷಕರಾಗಿದ್ದರು.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಕುಮಾರ್ ಅವರನ್ನು ಬೈಂದೂರು ವೃತ್ತ ನಿರೀಕ್ಷಕರಾಗಿ ವರ್ಗಾವಣೆ ಮಾಡಲಾಗಿದೆ. ಬೈಂದೂರು ವೃತ್ತ ನಿರೀಕ್ಷಕರಾಗಿದ್ದ ಸವಿತೃತೇಜ್ ಅವರನ್ನು ಮಂಗಳೂರು ಪಶ್ಚಿಮ ವಲಯದ ಐಜಿಪಿ ಕಚೇರಿಗೆ ವರ್ಗಾಯಿಸಲಾಗಿದೆ. ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಜ್ಮತ್ ಅಲಿ ಅವರನ್ನು ಕಾಪು ವೃತ್ತ ನಿರೀಕ್ಷಕರಾಗಿ ವರ್ಗಾಯಿಸಲಾಗಿದೆ.





