ಕಾರಿಗೆ ರಿಕ್ಷಾ ಅಡ್ಡಗಟ್ಟಿ ಕೊಲೆಬೆದರಿಕೆ: ಪ್ರಕರಣ ದಾಖಲು

ಕುಂದಾಪುರ, ಅ.7: ರಿಕ್ಷಾದಲ್ಲಿ ಹಿಂಬಾಲಿಸಿ ಕಾರಿಗೆ ಅಡ್ಡಗಟ್ಟಿ ಕೊಲೆ ಬೆದರಿಕೆಯೊಡ್ಡರುವ ಕೊಟೇಶ್ವರ ಗ್ರಾಮದ ಕುಂಬ್ರಿ ಎಂಬಲ್ಲಿ ಅ.6ರಂದು ರಾತ್ರಿ ವೇಳೆ ನಡೆದಿದೆ.
ಕೊಟೇಶ್ವರ ಗ್ರಾಮದ ಸಂದೀಪ ಮೊಗವೀರ(30) ಎಂಬವರು ಕಾರಿನಲ್ಲಿ ಹೋಗುತ್ತಿದ್ದ ಮಂಜುನಾಥ ಮೊಗವೀರ ಆಟೋ ರಿಕ್ಷಾದಲ್ಲಿ ಹಿಂಬಾಲಿಸಿ ಕೊಂಡು ಬಂದು, ರಿಕ್ಷಾವನ್ನು ಕಾರಿಗೆ ಅಡ್ಡಲಾಗಿ ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ನನ್ನ ರಿಕ್ಷಾದಲ್ಲಿ 4-5 ಮಂದಿ ಕತ್ತಿ ತಲವಾರು ತೆಗೆದುಕೊಂಡು ನಿನ್ನನ್ನು ಹಿಂಬಾಲಿಸುತ್ತಿದ್ದೆವೆ, ನಿನ್ನನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





