ಚಿನ್ನ ಶುದ್ದೀಕರಣ ಅಂಗಡಿಗೆ ನುಗ್ಗಿ ಸೊತ್ತು ಕಳವು

ಉಡುಪಿ, ಅ.14: ಚಿನ್ನ ಶುದ್ದಿಕರಣದ ಅಂಗಡಿಗೆ ನುಗ್ಗಿದ ಕಳ್ಳರು ಅಪಾರ ಮೌಲ್ಯದ ಚಿನ್ನ ಕಳವು ಮಾಡಿರುವ ಘಟನೆ ಉಡುಪಿ ನಗರದ ಗುಂಡಿಬೈಲು ಎಂಬಲ್ಲಿ ಅ.14ರಂದು ನಸುಕಿನ ವೇಳೆ ನಡೆದಿದೆ.
ಗುಂಡಿಬೈಲಿನ ಅಜಯ್ ತುಕಾರಾಮ್ ಜಾಧವ್ ಎಂಬವರು ತನ್ನ ಮನೆಯ ಮಹಡಿ ಮೇಲಿನ ರೂಮಿನಲ್ಲಿ ಕೆಲಸಗಾರ ರಾದ ಪಾಂಡುರಂಗ ಮಹಡಿಕ್ ಹಾಗೂ ರೋಹಿತ್ ಘೋರ್ಪಡೆ ಅವರೊಂದಿಗೆ ಚಿನ್ನ ಶುದ್ದೀಕರಣ ಕೆಲಸವನ್ನು ಮಾಡಿಕೊಂಡಿದ್ದರು. ರಾತ್ರಿ ಕೆಲಸಗಾರರು ಚಿನ್ನ ಶುದ್ದೀಕರಣ ಕೆಲಸ ಮಾಡಿ ಶುದ್ದೀಕರಿಸಿದ ಚಿನ್ನವನ್ನು ಪಾತ್ರೆಯಲ್ಲಿ ಬಿಟ್ಟು ರೂಮಿಗೆ ಬೀಗ ಹಾಕಿ ಮನೆಗೆ ಮಲಗಲು ಹೋಗಿದ್ದರು.
ಬೆಳಗ್ಗೆ ಎದ್ದು ರೂಮಿಗೆ ಹೋಗಿ ನೋಡಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂತು. ಕಳ್ಳರು ಬಾಗಿಲಿಗೆ ಹಾಕಿದ್ದ ಬೀಗವನ್ನು ಒಡೆದು ಚಿಲಕವನ್ನು ಮುರಿದು ಪಾತ್ರೆಯಲ್ಲಿದ್ದ ಶುದ್ದೀಕರಿಸಿದ ಚಿನ್ನದ ಪೌಡರ್‌ನ್ನು ಕಳವು ಮಾಡಿ ಕೊಂಡು ಹೋಗಿರುವುದಾಗಿ ದೂರಲಾಗಿದೆ. ಸದ್ಯಕ್ಕೆ ಕಳವಾದ ಚಿನ್ನ ಹಾಗೂ ಅದರ ಮೌಲ್ಯ ತಿಳಿದುಬಂದಿಲ್ಲ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





