ತ್ರೋಬಾಲ್: ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ

ಸುರತ್ಕಲ್, ಅ.16: ಶಾಲಾ ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆ , ಸುರತ್ಕಲ್ ಇವರ ವತಿಯಿಂದ ಇತ್ತೀಚೆಗೆ ಜರಗಿದ 14 ಮತ್ತು 17ರ ವಯೋಮಾನದ ಬಾಲಕ ಬಾಲಕಿಯರ ತ್ರೋಬಾಲ್ ಪಂದ್ಯಾಟದಲ್ಲಿ 14ರ ವಯೋಮಾನದಲ್ಲಿ ಜಾಮಿಯ ಆಂಗ್ಲ ಮಾಧ್ಯಮ ಶಾಲಾ ಬಾಲಕಿಯರ ತಂಡವು ದ್ವಿತೀಯ ಸ್ಥಾನ ಪಡೆದು, ಫಾತಿಮಾ ನಿಮ್ರ ಮತ್ತು ಶಜ್ನಾ ಸಫೀಯ ಚಿಕ್ಕಮಗಳೂರಿನಲ್ಲಿ ನಡೆಯುವ ಮೈಸೂರು ವಿಭಾಗ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಆಯ್ಕೆ ಯಾಗಿದ್ದಾರೆ.
Next Story





