ಪ್ರೇರಣಾ ಕೆಸಿಸಿಸಿಐ ಉಡುಪಿ ನೂತನ ಅಧ್ಯಕ್ಷರಾಗಿ ಆಲ್ವಿನ್ ಕ್ವಾಡ್ರಸ್ ಆಯ್ಕೆ

ಉಡುಪಿ, ಅ.14: ಕರಾವಳಿ ಕ್ರಿಶ್ಚಿಯನ್ ಛೇಂಬರ್ ಆಫ್ ಕಾಮರ್ಸ್ ಇಂಡಸ್ಟ್ರೀಸ್(ಕೆಸಿಸಿಸಿಐ) ಪ್ರೇರಣಾ ಇದರ 2025-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಉದ್ಯಮಿ, ಸಾಮಾಜಿಕ ಕಾರ್ಯಕರ್ತ ಆಲ್ವಿನ್ ಕ್ವಾಡ್ರಸ್ ಕೋಟ ಆಯ್ಕೆಯಾಗಿದ್ದಾರೆ.
ಕಥೊಲಿಕ್ ಸಭಾ, ರೋಟರಿ ಕ್ಲಬ್ ಸಹಿತ ವಿವಿಧ ಸಂಘಟನೆಗಳಲ್ಲಿ ಅಧ್ಯಕ್ಷ ಸಹಿತ ವಿವಿಧ ಹುದ್ದೆಗಳನ್ನು ಅಲಂಕರಿಸಿ ರುವ ಆಲ್ವಿನ್ ಉತ್ತಮ ಸಂಘಟನಾ ಕಾರರಾಗಿದ್ದಾರೆ. ಅವರು ಬ್ರಹ್ಮಾವರ ಕಥೊಲಿಕ್ ಕ್ರೆಡೀಟ್ ಕೋ ಅಪರೇಟಿವ್ ಸೊಸೈಟಿ ಇದರ ನಿರ್ದೇಶಕರಾಗಿ ಕೂಡ ಸೇವೆ ಸಲ್ಲಿಸುತ್ತಿದ್ದಾರೆ.
ಮಣಿಪಾಲ ವ್ಯಾಲಿವ್ಯೆ ಕಂಟ್ರಿ ಕಲ್ಬ್ ನಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಂಘಟನೆಯ ಇತರ ಪದಾಧಿಕಾರಿಗಳು ಉಪಾಧ್ಯಕ್ಷ ರಾಗಿ ಜಿತೇಂದ್ರ ಫುರ್ಟಾಡೊ ಪಲಿಮಾರು, ಪ್ರಧಾನ ಕಾರ್ಯದರ್ಶಿ ವಿಲ್ಸನ್ ಡಿಸೋಜ ಶಿರ್ವ, ಕೋಶಾಧಿಕಾರಿ ಮ್ಯಾಕ್ಷಿಮ್ ಸ್ಟೀಫನ್ ಸಲ್ಡಾನಾ, ಸಹ ಕಾರ್ಯದರ್ಶಿ ಜೀವನ್ ಸಾಲಿನ್ಸ್ ಕುಂದಾಪುರ.
Next Story





