ಇಂದ್ರಾಳಿ ಸೇತುವೆ ಬಳಿ ಮೆಟ್ಟಲು ನಿರ್ಮಿಸಲು ಆಗ್ರಹ

ಉಡುಪಿ, ಅ.17: ಇಂದ್ರಾಳಿ ಸೇತುವೆ ಇದೀಗ ಕಾಮಗಾರಿ ಪೂರ್ಣ ಗೊಂಡಿದ್ದು, ಸಾರ್ವಜನಿಕರಿಗೆ ಅನುಕೂಲ ವಾಗುವಂತೆ ಮೆಟ್ಟಲುಗಳನ್ನು ಸ್ಥಾಪಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಇಲ್ಲಿನ ಶಾಲಾ ಮಕ್ಕಳು ಹಾಗೂ ಉಡುಪಿಯಿಂದ ಇಂದ್ರಾಳಿಗೆ ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸುವ ಯಾತ್ರಾತ್ರಿಗಳಿಗೆ ರೈಲ್ವೆ ಪ್ರಯಾಣಿಕರಿಗೆ ರಸ್ತೆ ದಾಟಿ. ಇನ್ನೊಂದು ರಸ್ತೆಗೆ ಸಂಪರ್ಕಿಸಲು ತೊಂದರೆ ಆಗುತ್ತದೆ. ಅದಕ್ಕಾಗಿ ಮೆಟ್ಟಿಲು ಹಾಗೂ ಜೀಬ್ರಾ ಕ್ರಾಸಿಂಗ್ ನಿರ್ಮಿಸಬೇಕು.
ಸಾರ್ವಜನಿಕರಿಗೆ ಉಪಯೋಗವಾಗುವಂತೆ ಪಾದಾಚಾರಿಗಳಿಗೆ ಗ್ರಿಲ್ ನಿರ್ಮಿಸಬೇಕು. ಎರಡು ರಸ್ತೆ ಬದಿ ದೀಪದ ವ್ಯವಸ್ಥೆ. ಕಲ್ಪಿಸಬೇಕು. ಟ್ರಾಫಿಕ್ ನಿಯಮದಂತೆ ವೇಗ ಮಿತಿ ಕಡಿಮೆ ಮಾಡುವ ಬೋರ್ಡ್ ಅಳವಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್‌ರಾಜ್ ಸರಳೇಬೆಟ್ಟು. ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
Next Story





