ಕೋಡಿ ಬ್ಯಾರೀಸ್ ಕಾಲೇಜಿನ ವಾರ್ಷಿಕ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ

ಕುಂದಾಪುರ, ಅ.18: ಕೋಡಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾ ಘಟಕದ ವತಿಯಿಂದ ಝೆನಿತ್ 2025-26 ವಾರ್ಷಿಕ ಕ್ರೀಡಾ ಚಟುವಟಿಕೆಯ ಉದ್ಘಾಟನಾ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸ ಲಾಗಿತ್ತು.
ಸಂಪನ್ಮೂಲ ವ್ಯಕ್ತಿಗಳಾಗಿ ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಗಣೇಶ್ ಶೆಟ್ಟಿ ಕಟ್ಕೇರಿ ಮಾತನಾಡಿ, ಜೀವನವನ್ನು ಸದೃಢಗೊಳಿಸಲು ಆರೋಗ್ಯವನ್ನು ಕಾಪಾಡಲು ಕ್ರೀಡೆ ಅತೀ ಮುಖ್ಯ. ಶಿಕ್ಷಕರು ಪೋಷಕರು ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸುತ್ತಾರೆ. ತಪ್ಪುಗಳನ್ನು ಗುರುತಿಸಿ ಅವರನ್ನು ಯಶಸ್ವಿಗೊಳಿಸುವತ್ತಾ ಸದಾ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಬ್ಯಾರೀಸ್ ಕಾಲೇಜು ಕಡಲ ತಟದಲ್ಲಿರುವುದರಿಂದ ಇದು ಕ್ರೀಡೆಗೆ ಅತ್ಯುತ್ತಮವಾದ ಕೇಂದ್ರವಾಗಿದೆ ಎಂದರು.
ತೇವಾಂಶ ಭರಿತ ಗಾಳಿ ಸಂಪತ್ಭರಿತ ಆಮ್ಲಜನಕದ ಪೂರೈಕೆಯಿಂದಾಗಿ ಕ್ರೀಡಾ ಸ್ನೇಹಿ ಪರಿಸರವಾಗಿದೆ. ಈ ಕಾಲದಲ್ಲಿ ಕ್ರೀಡಾ ವ್ಯವಸ್ಥೆಗಳು ತುಂಬಾ ಇರುವಾಗ ಅವಕಾಶಗಳನ್ನು ಸರಿಯಾದ ಕ್ರಮದಲ್ಲಿ ಬಳಸಿಕೊಂಡು, ತಮ್ಮ ಸಂಸ್ಥೆಯ ಕ್ರೀಡಾ ಘಟಕ ಝೆನಿತ್’ ಹೆಸರಿನ ಅರ್ಥಕ್ಕೆ ಸರಿ ಹೊಂದುವಂತೆ ಉತ್ತುಂಗ ಸ್ಥಾನಕ್ಕೆ ಏರಿ ಸಾಧನೆಯನ್ನು ಮಾಡಬೇಕು ಎಂದು ಅವರು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲೆ ಶಬೀನಾ ಎಚ್. ಮಾತನಾಡಿ, ಆಸಕ್ತಿಯೊಂದಿಗೆ ಸತತ ಅಭ್ಯಾಸ ಅಗತ್ಯವಾಗಿ ಮಾಡ ಬೇಕು. ನಾವು ಎಷ್ಟು ಪರಿಣಾಮಕಾರಿಯಾಗಿ ಅಭ್ಯಾಸವನ್ನು ಮಾಡುತ್ತೆವೆಯೋ ಅಷ್ಟೇ ಉತ್ತಮ ಫಲಿತಾಂಶವನ್ನು ತರಲು ಸಾಧ್ಯ. ಕ್ರೀಡೆಯ ಅವಕಾಶವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು. ಸೋಲು ಗೆಲುವು ಒಂದೇ ಮುಖ್ಯ ಅಲ್ಲ ಭಾಗವಹಿಸುವಿಕೆ ಅತೀ ಮುಖ್ಯ ಎಂದರು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ.ಎಂ.ಅಬ್ದುಲ್ ರೆಹಮಾನ್ ಬ್ಯಾರಿ ಅಧ್ಯಕ್ಷತೆಯನ್ನು ವಹಿಸಿ ದ್ದರು. ಕಾಲೇಜಿನ ಉಪಪ್ರಾಂಶುಪಾಲೆ ಅಫ್ರಿನ್ ಖಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ದೈಹಿಕ ಶಿಕ್ಷಣ ನಿರ್ದೇಶಕ ಸೌರಭ್ ಗಣ್ಯರನ್ನು ಪರಿಚಯಿಸಿದರು. ಕ್ರೀಡಾ ವಿದ್ಯಾರ್ಥಿ ಸಂಯೋಜಕ ಮೊಹಮ್ಮದ್ ಅರಫಾತ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಝ್ಕಾ ಅನಮ್ ಸ್ವಾಗತಿಸಿ, ವಿದ್ಯಾರ್ಥಿನಿ ಆಯಿಷಾ ಇಸ್ಬಾ ವಂದಿಸಿದರು. ವಿದ್ಯಾರ್ಥಿನಿ ಆಮ್ನಾ ಹಿಭಾ ಕಾರ್ಯಕ್ರಮ ನಿರೂಪಿದರು.







