ಕೋಳಿ ಅಂಕಕ್ಕೆ ದಾಳಿ: ಐವರ ಬಂಧನ

ಮಣಿಪಾಲ, ಅ.20: ಹಿರೇಬೆಟ್ಟು ಗ್ರಾಮದ ಪಾಲ್ಕಟ್ಟ ಎಂಬಲ್ಲಿ ಅ.19ರಂದು ಮಧ್ಯಾಹ್ನ ವೇಳೆ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಹಿರೇಬೆಟ್ಟುವಿನ ಶೇಖರ ಪೂಜಾರಿ, ಗಣಪತಿ ನಾಯ್ಕ, ರವಿ ಶೆಟ್ಟಿ, 80 ಬಡಗಬೆಟ್ಟುವಿನ ಸುರೇಶ್ ಪೂಜಾರಿ, ಆತ್ರಾಡಿಯ ಈರಪ್ಪ ನಲ್ಕೆ ಬಂಧಿತ ಆರೋಪಿಗಳು. ಇವರಿಂದ 5 ಮೊಬೈಲ್ ಫೋನ್, 14500ರೂ. ಮೌಲ್ಯದ ಒಟ್ಟು 12 ಕೋಳಿಗಳನ್ನು, 1450ರೂ. ನಗದು ಹಾಗೂ 4 ಕೋಳಿ ಬಾಳುಗಳನ್ನು ಮತ್ತು ಒಂದು ಬೈಕ್ ಮತ್ತು ಸ್ಕೂಟರ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





