ದೋಣಿಯಿಂದ ಸಮುದ್ರಕ್ಕೆ ಬಿದ್ದು ಮೃತ್ಯು

ಬೈಂದೂರು, ಅ.20: ದೋಣಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಮೀನುಗಾರರೊಬ್ಬರು ನೀರಿಗೆ ಬಿದ್ದು ಮೃತಪಟ್ಟ ಘಟನೆ ಅ.20ರಂಜು ಬೆಲಗ್ಗೆ ನಡೆದಿದೆ.
ಮೃತರನ್ನು ಉಪ್ಪುಂದ ಗ್ರಾಮದ ತಾರಾಪತಿ ಮಡಿಕಲ್ ನಿವಾಸಿ ವಿನಯ(37) ಎಂದು ಗುರುತಿಸಲಾಗಿದೆ. ಇವರು ಸಮುದ್ರಕ್ಕೆ ತನ್ನ ದೋಣಿಯಲ್ಲಿ ಮೀನು ಹಿಡಿಯಲು ಹೋಗಿದ್ದು ಮೀನು ಹಿಡಿಯುತ್ತಿದಾಗ ಅವರು ಆಕಸ್ಮಿಕವಾಗಿ ನೀರಿಗೆ ಬಿದ್ದು ಅಸ್ವಸ್ಥರಾದರೆನ್ನಲಾಗಿದೆ. ಕೂಡಲೇ ಅವರನ್ನು ಮೇಲಕ್ಕೇತ್ತಿ ದಡ ತಂದು ನೋಡಿದಾಗ ಮೃತಪಟ್ಟಿ ರುವುದು ಕಂಡು ಬಂದಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





