ಉಚ್ಚಿಲ: ತ್ಯಾಜ್ಯ ಸಂಗ್ರಹದ ವಾಹನ ಢಿಕ್ಕಿ: ಬೈಕ್ ಸವಾರ ತೀವ್ರ ಗಾಯ

ಉಡುಪಿ, ಅ.21: ಉಚ್ಚಿಲ ಬಡಾ ಗ್ರಾಪಂಗೆ ಸಂಬಂಧಿಸಿ ತ್ಯಾಜ್ಯ ಸಂಗ್ರಹಿಸುವ ವಾಹನ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರೊಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಮೂಳೂರು ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಬೆಳಗ್ಗೆ 9:30ರ ಸುಮಾರಿಗೆ ನಡೆದಿದೆ.
ಗಾಯಗೊಂಡವರನ್ನು ಬೈಕ್ ಸವಾರ ಪರ್ಕೀಣಕಟ್ಟೆಯ ಮಂಜು(30) ಎಂದು ಗುರುತಿಸಲಾಗಿದೆ. ತ್ಯಾಜ್ಯ ಸಂಗ್ರಹದ ಸ್ವಚ್ಛ ವಾಹಿನಿ ವಾಹನವು ಬೈಕಿಗೆ ಢಿಕ್ಕಿ ಹೊಡಿದಿದ್ದು, ಇದರಿಂದ ಬೈಕ್ ಸವಾರ ಬೈಕ್ ಸಮೇತ ರಸ್ತೆ ಬಿದ್ದು ಗಾಯಗೊಂಡರೆನ್ನಲಾಗಿದೆ.
ಕೂಡಲೇ ಅವರನ್ನು ಆಂಬುಲೆನ್ಸ್ ನಲ್ಲಿ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಸಾಮಾಜಿಕ ಕಾರ್ಯಕರ್ತರಾದ ಸಿರಾಜ್, ಜಲಾಲುದ್ದೀನ್ ಉಚ್ಚಿಲ, ರಫೀಕ್, ಕಲಂದರ್ ಸಹಕರಿಸಿದರು.
ಸ್ಥಳಕ್ಕೆ ಪಡುಬಿದ್ರೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
Next Story





