ತೆಕ್ಕಟ್ಟೆ ಕ್ರಿಯೇಶನ್ ಕ್ಲಬ್‌ಗೆ ದಾಳಿ: ಏಳು ಮಂದಿ ಬಂಧನ

ಕೋಟ, ಅ.24: ತೆಕ್ಕಟ್ಟೆ ಗ್ರಾಮದ ಜನಪ್ರೀಯ ಕಾಂಪ್ಲೆಕ್ಸ್‌ನ ಎಸ್.ಪಿ. ಕ್ರಿಯೇಶನ್ ಕ್ಲಬ್‌ನಲ್ಲಿ ಅ.23ರಂದು ಸಂಜೆ ವೇಳೆ ಇಸ್ಪೀಟು ಜುಗಾರಿ ಆಡುತ್ತಿದ್ದ ಏಳು ಮಂದಿಯನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.
ಹಂಗಳೂರು ಕೋಡಿ ರಸ್ತೆಯ ಶ್ರೀನಿವಾಸ(63), ಬಿದ್ಕಲ್ಕಟ್ಟೆಯ ಸೂರ್ಯ(51), ಅಂಬಾಗಿಲು ಹನುಮಂತ ನಗರದ ಚಂದ್ರಹಾಸ(40), ಬೀಜಾಡಿ ಗ್ರಾಮದ ಕೃಷ್ಣ(46), ಕುಂಭಾಶಿ ಗ್ರಾಮದ ಕೊರವಾಡಿಯ ಫುರಂದರ(44), ಬ್ರಹ್ಮಾವರ ಕೊಳಂಬೆಯ ರಜಾಕ್(52), ನೀಲಾವರ ಗ್ರಾಮದ ಸದಾಶಿವ ದೇವಾಡಿಗ(48) ಬಂಧಿತ ಆರೋಪಿಗಳು.
ಇವರಿಂದ 1,130ರೂ. ನಗದು, ಏಳು ಮೊಬೈಲ್ ಫೋನುಗಳು ಹಾಗೂ ಇತರ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





