ಮಂಡ್ಯ ರೈಸ್ ಮಿಲ್ಗೆ ಅಕ್ರಮ ಸಾಗಾಟ: ಲಕ್ಷಾಂತರ ರೂ. ಮೌಲ್ಯದ ಅನ್ನಭಾಗ್ಯದ ಅಕ್ಕಿ ವಶ

ಸಾಂದರ್ಭಿಕ ಚಿತ್ರ
ಗಂಗೊಳ್ಳಿ, ಅ.24: ಲಾರಿಯಲ್ಲಿ ಮಂಡ್ಯಕ್ಕೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಧಿಕಾರಿಗಳು ಹಾಗೂ ಪೊಲೀಸರು ಇಂದು ಮರವಂತೆ ಬೀಚ್ ಹತ್ತಿರದ ರಾ.ಹೆ 66ರಲ್ಲಿ ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿಯಂತೆ ಕುಂದಾಪುರ ಆಹಾರ ನಿರೀಕ್ಷಕ ಸುರೇಶ್ ಎಚ್.ಎಸ್. ಗಂಗೊಳ್ಳಿ ಪೊಲೀಸರೊಂದಿಗೆ ಲಾರಿಯನ್ನು ತಡೆದು ನಿಲ್ಲಿಸಿದ್ದು, ಲಾರಿ ಚಾಲಕ ನಂಜುಂಡ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಪರಿಶೀಲಿಸಿದಾಗ ಭಟ್ಕಳದ ಶಫೀಕ್ ಸಾಹೇಬ್ ಎಂಬವರು ತನ್ನ ಲಾರಿಯಲ್ಲಿ ಒಟ್ಟು 107 ಕ್ವಿಂಟಾಲ್ ಅಕ್ಕಿಯನ್ನು ಮಂಡ್ಯದ ರೈಸ್ ಮಿಲ್ಲಿಗೆ ಸಾಗಿಸುತ್ತಿದ್ದರೆನ್ನ ಲಾಗಿದೆ. ಲಾರಿ ಹಾಗೂ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಅಕ್ಕಿಯ ಮೌಲ್ಯ 2,56,800ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





