ವಕ್ಫ್ ಆಸ್ತಿ ಬಗ್ಗೆ ಮಾಹಿತಿ ಕಾರ್ಯಾಗಾರ

ಉಡುಪಿ, ಅ.25: ಉಡುಪಿ ಜಿಲ್ಲೆಯ ಎಲ್ಲಾ ವಕ್ಫ್ ಆಸ್ತಿಗಳನ್ನು ಯುಡಬ್ಲ್ಯುಎಂಇಇಡಿ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡುವ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಗುರುವಾರ ಉಡುಪಿ ಜಾಮಿಯಾ ಮಸೀದಿ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ವಕ್ಸ್ ಕಾಯ್ದೆ ಕಲಂ 32(2)(ಡಿ) ಅಡಿಯಲ್ಲಿ ಪೋರ್ಟಲ್‌ನಲ್ಲಿ ಮೇಕರ್ ಆಗಿ ನೋಂದಣಿ ಮಾಡಿಕೊಳ್ಳುವುದು ಹಾಗೂ ತಮ್ಮ ಸಂಸ್ಥೆಗಳ ವಕ್ಫ್ ಆಸ್ತಿಗಳ ದಾಖಲೆಗಳನ್ನು ಅಪ್ಲೋಡ್ ಮಾಡುವ ಬಗ್ಗೆ ಉಡುಪಿ ಜಿಲ್ಲಾ ವಕ್ಫ್ ಅಧಿಕಾರಿ ನಾಝೀಯಾ ತರಬೇತಿ ನೀಡಿದರು.
ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲಾ ವಕ್ಪ್ ಸಂಸ್ಥೆಯ ಅಧ್ಯಕ್ಷರು ಕಾರ್ಯದರ್ಶಿಗಳು, ಮುತವಲ್ಲಿಗಳು, ಅಡಳಿತಾಧಿಕಾರಿಗಳು ಹಾಗೂ ಕೇರ್ ಟೇಕರ್‌ಗಳು ಮತ್ತು ವಕ್ಫ್ ಸಿಬ್ಬಂದಿ ಅಖಿಲಾ, ಆದಿಲ್ ಹಾಜರಿದ್ದರು.
Next Story





