ಬಾಲಕ ಆತ್ಮಹತ್ಯೆ

ಬೈಂದೂರು, ಅ.27: ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಲು ಇಷ್ಟ ವಿಲ್ಲದ ಕಾರಣಕ್ಕೆ ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಖಂಬದಕೋಣೆಯ ತೆಂಕಬೆಟ್ಟು ಹಳಗೇರಿ ಎಂಬಲ್ಲಿ ಅ.26ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಹಳಗೇರಿಯ ರಮೇಶ ಜೋಗಿ ಎಂಬವರ ಮಗ ಸ್ಕಂದ(16) ಎಂದು ಗುರುತಿಸಲಾಗಿದೆ. ಸ್ಕಂದ ಬೆಂಗಳೂರಿನಲ್ಲಿ ವಿಧ್ಯಾಬ್ಯಾಸ ಮಾಡಲು ಇಷ್ಟವಿಲ್ಲದ ಕಾರಣ ಅಥವಾ ಯಾವುದೋ ವೈಯಕ್ತಿಕ ಕಾರಣಗಳಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಮಲಗುವ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





