ಮಲಬಾರ್ ಗೋಲ್ಡ್‌ನಿಂದ ಕನ್ನಡ ರಾಜ್ಯೋತ್ಸವ ಆಚರಣೆ

ಉಡುಪಿ, ನ.1: ಉಡುಪಿ ಗೀತಾಂಜಲಿ ಶಾಪರ್ ಸಿಟಿಯಲ್ಲಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಉಡುಪಿ ಮಳಿಗೆಯಲ್ಲಿ ಆಚರಿಸಲಾಯಿತು.
ಶಾಖಾ ವ್ಯವಸ್ಥಾಪಕ ಪುರಂದರ ತಿಂಗಲಾಯ ಧ್ವಜಾರೋಹಣ ನೆರೆವರಿಸಿ ಕರ್ನಾಟಕ ರಾಜ್ಯೋತ್ಸದ ಶುಭಾಶಯ ತಿಳಿಸಿದರು. ಸೇಲ್ಸ್ ವ್ಯವಸ್ಥಾಪಕ ಮುಸ್ತಫಾ ಏ.ಕೆ ಸ್ವಾಗತಿಸಿ ವಂದಿಸಿದರು. ಮಾರುಕಟ್ಟೆ ಉಸ್ತುವಾರಿ ತಂಝೀಮ್ ಶಿರ್ವ, ಹರೀಶ್ ಎಂ.ಜಿ, ರಾಘವೇಂದ್ರ,ಸಂದೀಪ್ ಸಪಾಳ್ಯ, ಗ್ರಾಹಕರು, ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು.
Next Story





