ಸೀನಿಯರ್ ಚೇಂಬರ್ ಯೂತ್‌ವಿಂಗ್ ಉದ್ಘಾಟನೆ

ಶಂಕರನಾರಾಯಣ, ನ.1: ಶಂಕರನಾರಾಯಣ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಸೀನಿಯರ್ ಚೇಂಬರ್ ಶಂಕರನಾರಾಯಣ ಲೀಜನ್ ಯೂತ್ ವಿಂಗ್ ಉದ್ಘಾಟನೆ ಮತ್ತು ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಸೀನಿಯರ್ ಚೇಂಬರ್‌ನ ತರಬೇತಿ ಮತ್ತು ಯುವ ವ್ಯವಹಾರಗಳ ರಾಷ್ಟ್ರೀಯ ನಿರ್ದೇಶಕ ಹುಸೇನ್ ಹೈಕಾಡಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ವೆಂಕಟರಾಮ್ ಭಟ್ ವಹಿಸಿದ್ದರು.
ಸೀನಿಯರ್ ಚೇಂಬರ್ ಶಂಕರನಾರಾಯಣ ಲೀಜನ್‌ನ ಅಧ್ಯಕ್ಷ ರಾಮ ಚಂದ್ರ ದೇವಾಡಿಗ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಯೂತ್ ವಿಂಗ್ ಅಧ್ಯಕ್ಷ ನಿಖಿತ್ ಕುಮಾರ್, ಕಾರ್ಯದರ್ಶಿ ನಿಧಿ ಶೆಟ್ಟಿ, ಖಜಾಂಜಿ ಸಹನಾ ಹಾಗೂ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಯೂತ್ ವಿಂಗ್ ಸಂಚಾಲಕಿ ಪ್ರಜ್ಞಾ ಸ್ವಾಗತಿಸಿದರು. ಎಂ.ಕಾಂ. ವಿದ್ಯಾರ್ಥಿನಿಯರಾದ ಶ್ವೇತಾ ಮತ್ತು ಪಲ್ಲವಿ ಅತಿಥಿ ಪರಿಚಯ ಮಾಡಿ, ಸಹನಾ ನಿರೂಪಿಸಿ, ಸುಷ್ಮಾ ವಂದಿಸಿದರು. ಬಳಿಕ ಸೀನಿಯರ್ ಚೇಂಬರ್‌ನ ವಲಯ 15ರ ತರಬೇತುದಾರ ಕೆ.ಕೆ.ಶಿವರಾಮ ನಾಯಕತ್ವ ಅಭಿವೃದ್ಧಿಯ ಕುರಿತು ತರಬೇತಿ ಕಾರ್ಯಗಾರ ನಡೆಸಿದರು.





