ಉಳ್ಳೂರು: ವಿದ್ಯಾಪೋಷಕ್ ವಿದ್ಯಾರ್ಥಿನಿಗೆ ಮನೆ ಹಸ್ತಾಂತರ

ಕುಂದಾಪುರ, ಜ.4: ವಿದ್ಯಾಪೋಷಕ್ ಪ್ರಥಮ ಪಿ.ಯು.ವಿದ್ಯಾರ್ಥಿನಿ, ಉಳ್ಳೂರಿನ ತೃಪ್ತಿಗೆ ದೀಪಾ ಮತ್ತು ಅರುಣ ಕುಮಾರ್ ಸುಮಾರು 7 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿಕೊಟ್ಟ ‘ಶ್ರೀಸಿದ್ಧಿವಿನಾಯಕ’ ಮನೆಯನ್ನು ರವಿವಾರ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು.
ಶ್ರೀಸಿದ್ಧಿವಿನಾಯಕ ಕ್ಯಾಶ್ಯು ಇಂಡಸ್ಟ್ರೀಸ್ ಮಾಲಕ ಅರುಣ್ ಕುಮಾರ್ ಶೆಟ್ಟಿ, ಕುಂದಾಪುರ, ವಿಠ್ಠಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಪ್ರವರ್ತಕ ಕೊರ್ಗಿ ವಿಠ್ಠಲ ಶೆಟ್ಟಿ, ತೆಕ್ಕಟ್ಟೆ ರೋಟರಿ ಅಧ್ಯಕ್ಷ ಮಲ್ಯಾಡಿ ಸುಧೀರ್ ಕುಮಾರ್ ಶೆಟ್ಟಿ ಮಾತನಾಡಿದರು.
ಪಂಚಾಯತ್ ಉಪಾಧ್ಯಕ್ಷೆ ಬೇಬಿ, ಸದಸ್ಯರಾದ ರಾಮಚಂದ್ರ ಶೇರಿಗಾರ್, ಜಯಶ್ರೀ ಶೆಟ್ಟಿ ಹಾಗೂ ಯಕ್ಷಗಾನ ಕಲಾರಂಗದ ಎಸ್.ವಿ. ಭಟ್, ಕೆ.ಸದಾಶಿವ ರಾವ್, ಯು.ವಿಶ್ವನಾಥ ಶೆಣೈ, ಭುವನ ಪ್ರಸಾದ ಹೆಗ್ಡೆ, ಅನಂತರಾಜ ಉಪಾಧ್ಯ, ಸಂತೋಷ ಕುಮಾರ್ ಶೆಟ್ಟಿ, ಕಿಶೋರ್ ಸಿ.ಉದ್ಯಾವರ, ಗಣಪತಿ ಭಟ್, ಜಯರಾಮ ಪಡಿಯಾರ್, ಅಜಿತ್ ಕುಮಾರ್, ವಿಶ್ವನಾಥ, ವೈಷ್ಣವಿ, ಸನಕ ಕಡೆಕಾರ್ ಉಪಸ್ಥಿತರಿದ್ದರು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ.ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.







