ಕೋಳಿ ಅಂಕ: ಏಳು ಮಂದಿ ವಶಕ್ಕೆ

ಕಾರ್ಕಳ, ಜ.22: ನಲ್ಲೂರು ಗ್ರಾಮದ ಬಂಗರೋಡಿ ಎಂಬಲ್ಲಿ ಜ.21ರಂದು ಸಂಜೆ ವೇಳೆ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ.
ಶಿರ್ವ ಪಂಜಿಮಾರು ನಿವಾಸಿ ರವಿ(46), ಸ್ಟೀಫನ್(37), ಸೊರ್ಕಳ ನಿವಾಸಿ ಸತೀಶ್(45), ಕಟೀಲು ತಳವಾರುವಿನ ಅಡಿಗಪ್ಪ(31), ಉದ್ಯಾವರ ಸಂಪಿಗೆನಗರದ ಅಪ್ಪು(53), ಸಂದೀಪ್(42) ಬಂಧಿತ ಆರೋಪಿಗಳು. ಇವರಿಂದ 4 ಹುಂಜ ಕೋಳಿಗಳು, 3000ರೂ. ನಗದು, 2 ಬಾಳು ಕತ್ತಿ, ಒಂದು ಕಾರು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳ ಲಾಗಿದೆ.
Next Story





